ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚಟ್ಟಂಚಾಲ್‍ನಲ್ಲಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ವಿದ್ಯಾನಗರ ಉದಯಗಿರಿ ನಿವಾಸಿ ದಿನೇಶ್-ರತ್ನಾವತೀ ದಂಪತಿ ಪುತ್ರ, ಪೆರಿಯ ಸರ್ಕಾರಿ ಪೊಲಿಟೆಕ್ನಿಕ್‍ನ ತೃತೀಯ ವರ್ಷದ ಕಂಪ್ಯೂಟರ್ ವಿದ್ಯಾರ್ಥಿ ರಕ್ಷಿತ್ ಎನ್. ಮೃತಪಟ್ಟ ವಿದ್ಯಾರ್ಥಿ.
ಗುರುವಾರ ಚಟ್ಟಂಚಾಲ್ ಮೇಲ್ಸೇತುವೆ ಬಳಿ ಅಪಘಾತ ನಡೆದಿದ್ದು, ಸಹಪಾಠಿ ಕೊಲ್ಲಂಬಾಡಿ ನಿವಾಸಿ ಕೆ.ಎ ಸೈದ್ ಚಲಾಯಿಸುತ್ತಿದ್ದ ಬೈಕಿನ ಹಿಂಬದಿ ಸವಾರನಾಗಿದ್ದ ರಕ್ಷಿತ್ ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಬ್ಬರೂ ಕಾಲೇಜಿಂದ ಬೈಕಲ್ಲಿ ಮನೆಗೆ ತೆರಳುವ ಹಾದಿ ಮಧ್ಯೆ ಅಪಘಾತ ಸಂಭವಿಸಿತ್ತು. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

