ಪೆರ್ಲ: ವಸತಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆ ಜಾರಿಗೊಳಿಸುವಲ್ಲಿ ಎಣ್ಮಕಜೆ ಪಂಚಾಯಿತಿ ಆಡಳಿತ ಮುಂಚೂಣಿ ಕಾರ್ಯದುಕೊಂಡುಬಂದಿರುವುದಾಘಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಬಿ. ತಿಳಿಸಿದ್ದಾರೆ. ಅವರು ಎಣ್ಮಕಜೆ ಗ್ರಾಮ ಪಂಚಾಯಿತಿ 'ಲೈಫ್ ವಸತಿ ಯೋಜನೆ'ಯ ಫಲಾನುಭವಿಗಳ ಸಮಾವೇಶ ಹಾಗೂ ಕೀಲಿಕೈ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ವಳಮೊಗರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ರಮ್ಲಾಇಬ್ರಾಹಿಂ, ರಾಧಾಕೃಷ್ಣ ನಾಯಕ್, ವಿಜಯಾ ಕೆ.ಸಿ, ಗ್ರಾಪಂ ಸದಸ್ಯರಾದ ಪುಷ್ಪಾವತಿ, ಆಯಿಷಾ ಎ.ಎ ಪೆರ್ಲ, ಆಯಿಷತ್ ರಾಬಿಯಾ, ರಾಮಚಂದ್ರ ಎಂ, ನಳಿನಾಕ್ಷಿ ಸಿಸಿ, ಕೃಷ್ಣಪ್ಪ ಬಜಕೂಡ್ಲು, ಸೌದಾಬಿ ಹನೀಫ್, ಸಿಡಿಎಸ್ ಅಧ್ಯಕ್ಷೆ ನವೀನಾ ಕುಮಾರಿ, ಯೋಜನಾ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಗಾಂಭೀರ್ ಉಪಸ್ಥಿತರಿದ್ದರು. ವಿಇಓ ಪ್ರಮೋದ್ ಆರ್.ಆರ್ ವರದಿ ಮಂಡಿಸಿದರು. ಪ್ರಭಾರ ಕಾರ್ಯದರ್ಶಿ ಗಿರೀಶ್ ಟಿ ಸ್ವಾಗತಿಸಿದರು. ಪ್ರಭಾರ ಹೆಡ್‍ಕ್ಲರ್ಕ್ ವಿನೋದ್ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರದ ಬಗ್ಗೆ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಶೇಣಿ ಮಾಹಿತಿ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಬಿ, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.



