HEALTH TIPS

ಕೂಡ್ಲು ಯಕ್ಷಗಾನ ಕೇಂದ್ರದ ರಜತ ರಂಗ ಕಾರ್ಯಕ್ರಮ, ಸಂಸ್ಮರಣಾ ಸಮಾರಂಭ

ಕಾಸರಗೋಡು: ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೂಡ್ಲು ಸುಬ್ರಾಯ ಶಾನುಭಾಗ್ ಅವರ ಸಾಧನೆ ಮಹತ್ತರವಾದುದು ಎಂದು ಎಂದು ಸಂಘಟಕ ಜಗದೀಶ್ ಕೂಡ್ಲು ತಿಳಿಸಿದರು. 

ಅವರು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಯಕ್ಷಗಾನ ಕೇಂದ್ರದ ರಜತಮಹೋತ್ಸವ ಅಂಗವಗಿ ಆಯೋಜಿಸಲಾಗಿದ್ದ ರಜತ ರಂಗಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೂಡ್ಲು ನಾರಾಯಣ ಬಲ್ಯಾಯ ಸಂಸ್ಮರಣಾ ಭಾಷಣ ಮಾಡಿದರು. 

ಸುಬ್ರಾಯ ಶ್ಯಾನುಭಾಗ್ ಅವರಿಂದ ರಚಿಸಲಾದ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂ ತರಿಸಿದವರಲ್ಲಿ ಕಾವು ಕಣ್ಣ, ಬಲಿಪ ನಾರಾಯಣ ಭಾಗವತ, ಕುರಿಯ ವಿಠಲ ಶಾಸ್ತ್ರಿ ಬಣ್ಣದ ಕುಟ್ಯಪ್ಪು, ಕೂಡ್ಲು ನಾರಾಯಣ ಬಲ್ಯಾಯ ಮೊದಲಾದವರು ತಮ್ಮ ಶಿಷ್ಯರಿಗೆ ಯಕ್ಷಗಾನ ನಾಟ್ಯ, ಬಣ್ಣಗಾರಿಕೆ, ವೇಷಗಾರಿಕೆ, ಭಾಗವತಿಕೆ ಮೊದಲಾದ ಪ್ರಕಾರಗಳಲ್ಲಿ ಕಾಲಕಾ ಲಕ್ಕೆ ಬೇಕಾದ ಬದಲಾ ವಣೆಯನ್ನು ತಂದು ಯಕ್ಷಗಾನವನ್ನು ಶ್ರೀಮಂತಗೊಳಿಸಿದವರು. ಈ ನಿಟ್ಟಿನಲ್ಲಿ ಕೂಡ್ಲು ನಾರಾಯಣ ಬಲ್ಯಾಯ ಅವರ ಕೊಡುಗೆ ಮಹತ್ವದ್ದಾಗಿದೆ ಅವರು ಹೇ ಳಿದರು 

ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶಾನುಭಾಗ್ ಅಧ್ಯ ಕ್ಷತೆ ವಹಿಸಿದ್ದರು . ರಜತರಂಗದ ಅಧ್ಯಕ್ಷ ಡಾ. ಹರಿಕೃಷ್ಣ ಬಂಗೇರ, ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾನು ಪ್ರಕಾಶ್ ಕೂಡ್ಲು, ಕೂಡ್ಲು ಯಕ್ಷಾಭಿಮಾನಿ ಸಂಘಟನೆ  ಅಧ್ಯಕ್ಷ ಸುನಿಲ್ ಗಟ್ಟಿ, ನಾರಾಯಣ ಬಲ್ಯಾಯ ಅವರ ಪುತ್ರ ಯಾದವ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು . ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿದರು. ಕೃಷ್ಣಮೂರ್ತಿ ಅಡಿಗ ವಂದಿಸಿದರು . ಸುರೇಶ್ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries