HEALTH TIPS

ರಾಜ್ಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ ಕನಿಮೊಳಿ

 ಚೆನ್ನೈ: ಡಿಎಂಕೆ ಪಕ್ಷದ ಪ್ರಮುಖ ಮಹಿಳಾ ನಾಯಕಿ, ಸಂಸದೆ ಕನಿಮೊಳಿ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಮನವಿಯನ್ನು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರು ಒಪ್ಪಿಕೊಂಡರೆ, ರಾಜ್ಯ ರಾಜಕಾರಣದ ಶಕ್ತಿ ಕೇಂದ್ರದ ಸಮೀಕರಣವು ಬದಲಾಗಲಿದೆ.


ಸ್ಟಾಲಿನ್‌ ಅವರು ತಮ್ಮ ಉತ್ತರಾಧಿಕಾರಿಯಾಗಿ ಮಗ ಉದಯನಿಧಿ ಸ್ಟಾಲಿನ್‌ ಅವರನ್ನು ಮುಂದೆ ಮಾಡಿದ್ದಾರೆ. ಕನಿಮೊಳಿ ಅವರು ರಾಜ್ಯ ರಾಜಕಾರಣಕ್ಕೆ ಬರುವುದರಿಂದ ಸ್ಟಾಲಿನ್‌ ಅವರ ಈ ಯೋಜನೆಗೆ ಹೊಡೆತ ಬೀಳಲಿದೆ. ಪಕ್ಷದ ಮೂಲಗಳ ಪ್ರಕಾರ, ಕನಿಮೊಳಿ ಅವರು ತಮ್ಮ ಇಚ್ಛೆಯ ನಾಲ್ಕು ಕ್ಷೇತ್ರಗಳನ್ನೂ ಹೇಳಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಬರುವಂತೆ ಪಕ್ಷದ ಮಹಿಳಾ ಘಟಕವು ಕನಿಮೊಳಿ ಅವರಿಗೆ ಕೆಲವು ವಾರಗಳ ಹಿಂದೆ ಮನವಿ ಮಾಡಿತ್ತು. ಕನಿಮೊಳಿ ಮಾತ್ರವಲ್ಲ ಪಕ್ಷದ ಹಲವು ಸಂಸದರು ಇದೇ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. 'ಪಕ್ಷವು ಸತತ ಎರಡನೇ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿದೆ. ನಾವು ಸಂಸತ್ತಿನಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ನಮ್ಮ ರಾಜಕಾರಣದ ಅನುಭವವನ್ನು ಸಂಸತ್ತಿನಲ್ಲಿ ಸೂಕ್ತರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ' ಎಂದು ಹಲವು ಸಂಸದರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

'ತಾರತಮ್ಯ ಮಾಡದ ಸ್ಟಾಲಿನ್‌'

ಸಹೋದರಿ ಕನಿಮೊಳಿ ಮತ್ತು ಮಗ ಉದಯನಿಧಿ ಅವರ ಮಧ್ಯೆ ಸ್ಟಾಲಿನ್ ಅವರು ಎಂದಿಗೂ ತಾರತಮ್ಯ ಮಾಡಿಲ್ಲ ಎನ್ನುವುದು ಪಕ್ಷದ ಮೂಲಗಳ ಅಭಿಪ್ರಾಯ. ಇಬ್ಬರಿಗೂ ಸಮಾನ ಅವಕಾಶ ಮತ್ತು ಅಧಿಕಾರವನ್ನು ಸ್ಟಾಲಿನ್‌ ನೀಡಿದ್ದಾರೆ.

ಜೊತೆಗೆ ಉದಯನಿಧಿ ಅವರನ್ನು ಸಚಿವನನ್ನಾಗಿ ಬಳಿಕ ಉಪಮುಖ್ಯಮಂತ್ರಿಯನ್ನಾಗಿ ಘೋಷಿಸಿದಾಗಲೂ ಕನಿಮೊಳಿ ಅವರು ಸಣ್ಣ ಅಪಸ್ವರವನ್ನೂ ಎತ್ತಿಲ್ಲ. ಪಕ್ಷದ ಎಲ್ಲ ಪ್ರಮುಖ ನಿರ್ಧಾರದಲ್ಲಿಯೂ ಸ್ಟಾಲಿನ್‌ ಅವರು ಕನಿಮೊಳಿ ಅವರ ಮಾತುಗಳನ್ನು ಕೇಳುತ್ತಾರೆ. ತಾವು ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ಸಹೋದರ ಸ್ಟಾಲಿನ್‌ ಅವರ ಒಪ್ಪಿಗೆಯನ್ನು ಕನಿಮೊಳಿ ಅವರು ಕಾಯುತ್ತಿದ್ದಾರೆ.

ನಾಲ್ವರು ಎಸ್‌ಪಿಗಳ ವರ್ಗಾವಣೆ

ಚೆನ್ನೈ: ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರನೇ ದಿನವೇ ಕೇಂದ್ರ ಚುನಾವಣಾ ಆಯೋಗ ಸೋಮವಾರ ತಮಿಳುನಾಡಿನ ನಾಲ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಕರೂರು, ಈರೋಡ್, ನಾಗಪಟ್ಟಣಂ ಮತ್ತು ವಿರುಧುನಗರ್ ಜಿಲ್ಲೆಗಳ ಎಸ್‌ಪಿಗಳನ್ನು ವರ್ಗಾಯಿಸಲಾಗಿದೆ. ಕರೂರು ಎಸ್‌ಪಿ ಜೋಶ್ ತಂಗಯ್ಯ ಅವರ ಸ್ಥಾನಕ್ಕೆ ಹರಿಕೃಷ್ಣನ್ ಪ್ರಸಾದ್, ಈರೋಡ್‌ ಎಸ್‌ಪಿ ಎ.ಸುಜಾತ ಬದಲಿಗೆ ಡಿ.ವಿ.ಕಿರಣ್‌ ಶೃತಿ ಅವರನ್ನು ನಿಯೋಜಿಸಲಾಗಿದೆ.

ನಾಗಪಟ್ಟಣಂ ಎಸ್‌ಪಿ ಕೆ.ಬಲ್ಲಾ ಅವರ ಸ್ಥಾನಕ್ಕೆ ಸುಜಿತ್‌ ಕುಮಾರ್‌, ವಿರುಧುನಗರ ಜಿಲ್ಲೆಯ ಎಸ್‌ಪಿ ಡಿ.ಕಣ್ಣನ್‌ ಅವರ ಸ್ಥಾನಕ್ಕೆ ಎನ್‌.ಶ್ರೀನಾಥ ಅವರನ್ನು ನಿಯೋಜಿಸಲಾಗಿದೆ.

'ಕರೂರು ಎಸ್‌ಪಿ ಮತ್ತು ಜಿಲ್ಲಾಧಿಕಾರಿಯನ್ನು ತೆರವು ಮಾಡದೇ ಜಿಲ್ಲೆಯಲ್ಲಿ ಪಾರದರ್ಶಕ ಚುಣಾವಣೆ ಸಾಧ್ಯವಿಲ್ಲ' ಎಂದು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿಕೆ ನೀಡಿದ್ದರು. ಅದಾದ ಕೆಲ ಗಂಟೆಗಳಲ್ಲೇ ಆಯೋಗದ ನಿರ್ದೇಶನ ಹೊರಬಿದ್ದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries