HEALTH TIPS

ಹಾರ್ಮುಝ್ ಜಲಸಂಧಿಯ ಬಳಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ದಾಳಿ: ಬಿಹಾರ ಮೂಲದ ಇಂಜಿನಿಯರ್ ಮೃತ್ಯು

ನವದೆಹಲಿ: ಹಾರ್ಮುಝ್ ಜಲಸಂಧಿಯ ಬಳಿ ಅಮೆರಿಕದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಬಿಹಾರ ಮೂಲದ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.

ಮೃತದೇಹವನ್ನು ಭಾರತಕ್ಕೆ ಕರೆತರುವಂತೆ ಮೃತ ಇಂಜಿನಿಯರ್ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೃತ ಇಂಜಿನಿಯರ್ ಅವರನ್ನು ಬಿಹಾರದ ಭಗಲ್ಪುರ್ ಜಿಲ್ಲೆಯ ರಾಣಿ ಬಮಿಯಾನ್ ಗ್ರಾಮದ ನಿವಾಸಿ ದೇವನಂದನ್ ಪ್ರಸಾದ್ ಸಿಂಗ್ ಎಂದು ಗುರುತಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ, ಮಾರ್ಚ್ 11ರಂದು ಅವರು ಕೆಲಸ ಮಾಡುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ.

ಈ ಹಡಗು ಇರಾನ್ ಮತ್ತು ಒಮಾನ್ ನಡುವಿನ ವ್ಯೂಹಾತ್ಮಕ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಗೆ ಸಮೀಪದಲ್ಲಿರುವ ಅಲ್-ಝುಬೈರ್ ಬಂದರಿನ ಬಳಿ ಕಾರ್ಯಾಚರಿಸುತ್ತಿತ್ತು ಎಂದು ಹೇಳಲಾಗಿದೆ.

ಘಟನೆಯ ವಿವರಗಳ ಪ್ರಕಾರ, ದಾಳಿಗೆ ಗುರಿಯಾದ ಸಂದರ್ಭದಲ್ಲಿ ಹಡಗು 48,000 ಮೆಟ್ರಿಕ್ ಟನ್ ನಾಫ್ತಾವನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.

ಇರಾನ್‌ ನ ಜಲಾಂತರ್ಗಾಮಿ ಘಟಕವು ಮಾನವರಹಿತ ಸ್ಫೋಟಕಗಳನ್ನು ಹೊಂದಿದ್ದ ವೇಗದ ದೋಣಿಯನ್ನು ಬಳಸಿ ಹಡಗಿನ ಮೇಲೆ ಮಾರಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಸಾಗರ ಇಂಜಿನಿಯರ್ ದೇವನಂದನ್ ಪ್ರಸಾದ್ ಸಿಂಗ್ ಮೃತಪಟ್ಟಿದ್ದಾರೆ.

ಅವರು 1994ರಿಂದ ಅಮೆರಿಕ ಮೂಲದ ಹಡಗು ಕಂಪನಿ 'ಬ್ರೇವೊ ಶಿಪ್ ಮ್ಯಾನೇಜ್‌ಮೆಂಟ್'ನಲ್ಲಿ ಕೆಲಸ ಮಾಡುತ್ತಿದ್ದು, ಕಂಪೆನಿಯಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದರು ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries