HEALTH TIPS

ಜಗತ್ತಿನಾದ್ಯಂತ ಜನರಲ್ಲಿ ಭೀತಿ ಸೃಷ್ಟಿಸಿದ ಇರಾನ್! ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ವಿಶ್ವದಾದ್ಯಂತ ವಿಸ್ತರಿಸುವ ಸಾಧ್ಯತೆ?

ಟೆಹರಾನ್: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಸದ್ಯದಲ್ಲೇ ಪ್ರಪಂಚದಾದ್ಯಂತ ವಿಸ್ತರಿಸುವ ಸಾಧ್ಯತೆಯಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಯುದ್ಧ, ಪಶ್ಚಿಮ ಏಷ್ಯಾದ ಆಚೆಗೆ ದೂರದಲ್ಲಿರುವ ನಾಗರಿಕ ಸ್ಥಳಗಳಲ್ಲಿ ದಾಳಿಯ ಕಳವಳನ್ನುಂಟು ಮಾಡಿದೆ.

ಹೌದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವಂತೆಯೇ ಇರಾನ್ ಮಿಲಿಟರಿ ನೀಡಿರುವ ವಾರ್ನಿಂಗ್ ಜಗತ್ತಿನಾದ್ಯಂತ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಜಗತ್ತಿನಾದ್ಯಂತ "ಉದ್ಯಾನಗಳು, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು ಇನ್ನು ಮುಂದೆ ತನ್ನ ಶತ್ರುಗಳಿಗೆ ಸುರಕ್ಷಿತವಾಗಿರುವುದಿಲ್ಲ ಎಂದು ಘೋಷಿಸಿದೆ.

ಇರಾನ್ ನ ಹಿರಿಯ ವಕ್ತಾರ ಜನರಲ್ ಅಬೋಲ್‌ಫಜಲ್ ಶೆಕರ್ಚಿ ಈ ರೀತಿಯ ಬೆದರಿಕೆ ಹಾಕಿದ್ದಾರೆ. ಇದು ಅಮೆರಿಕ ಹಾಗೂ ಇಸ್ರೇಲ್ ನಿಂದ ಇರಾನ್ ನಿರಂತರ ಮೈಮಾನಿಕ ದಾಳಿಗೆ ಒಳಗಾಗುತ್ತಿರುವಂತೆ ಸಂಘರ್ಷದ ಭಯವನ್ನು ಗಾಢವಾಗಿಸುತ್ತಿದೆ.

ಶತ್ರು ರಾಷ್ಟ್ರಗಳಿಗೆ ವಿಶ್ವದಾದ್ಯಂತ ಪಾರ್ಕ್ ಗಳು, ಟೂರಿಸ್ಟ್ ಸ್ಛಳಗಳು ಸುರಕ್ಷಿತವಲ್ಲ ಎಂದು ಹೇಳುವ ಮೂಲಕ ಪ್ರತೀಕಾರದ ಜ್ವಾಲೆ ಪಶ್ಚಿಮ ಏಷ್ಯಾದಾಚೆಗೆ ವ್ಯಾಪಿಸುವ ಸಾಧ್ಯತೆಯಿದೆ. ಪ್ರಸ್ತುತ ಯುದ್ಧ ನಡೆಯುತ್ತಿರುವ ಪ್ರದೇಶಗಳಿಂದ ಸಹಸ್ರಾರು ಮೈಲಿ ದೂರದಲ್ಲಿರುವ ನಾಗರಿಕ ಸ್ಥಳಗಳ ಮೇಲೂ ದಾಳಿಯ ಕಳವಳವನ್ನುಂಟು ಮಾಡಿದೆ.

ನಾವು ನಿಮ್ಮ ಬಗ್ಗೆ ಪಡೆದಿರುವ ಮಾಹಿತಿ ಆಧಾರದ ಮೇಲೆ ಪಾರ್ಕ್, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು ಸೇರಿದಂತೆ ಇನ್ಮುಂದೆ ವಿಶ್ವದ ಯಾವುದೇ ಸ್ಥಳಗಳು ನಿಮಗೆ ಸುರಕ್ಷಿತವಲ್ಲ ಎಂದು ಶತ್ರು ರಾಷ್ಟ್ರಗಳಿಗೆ ಶೆಕರ್ಚಿ ಎಚ್ಚರಿಕೆ ನೀಡಿರುವುದಾಗಿ ಇರಾನ್ ನ ಸರ್ಕಾರಿ ವಾಹಿನಿಯೊಂದು ಸುದ್ದಿ ಪ್ರಕಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries