ಮುಳ್ಳೇರಿಯ: ತಂದೆಯನ್ನು ಹೊಡೆದು ಕೊಲೆಗೈದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಪುತ್ರ ಅಡೂರು ಪಾಂಡಿ ವೆಳ್ಳರಿಕಯ ನಿವಾಸಿ ನರೇಂದ್ರ ಪ್ರಸಾದ್ (28)ನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
2022ರ ಎಪ್ರೀಲ್ 5ರಂದು ಪ್ರಕರಣ ನಡೆದಿದ್ದು, ಪಾಂಡಿ ವೆಳ್ಳರಿಕಯದ ಮನೆಯಲ್ಲಿ ಬಾಲಕೃಷ್ಣ ನಾಯ್ಕ್ (57) ಎಂಬವರನ್ನು ಪುತ್ರ ನರೇಂದ್ರ ಪ್ರಸಾದ್ ಬರ್ಬರವಾಗಿ ಕೊಲೆ ನಡೆಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನಂತರ ಜಾಮೀನು ಪಡೆದು ಆರೋಪಿ ತಲೆಮರೆಸಿಕೊಂಡಿದ್ದನು. ಈತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿದ್ದು, ನಾಲ್ಕು ವರ್ಷದ ಬಳಿಕ ಪಾಂಡಿಯ ಮನೆ ಬಳಿಗೆ ಆಗಮಿಸಿದ ಬಗಗೆ ಮಹಿತಿ ಪಡೆದ ಆದೂರು ಎಸ್. ಐ. ಎಂ. ಸುಜಿಲೇಷ್ ಮತ್ತು ತಂಡ ಕಾರ್ಯಾಚರಣೆ ನಡೆಸಿತ್ತು.

