HEALTH TIPS

ಅಮರನಾಥ ಯಾತ್ರೆ: ಏಪ್ರಿಲ್ 15ರಿಂದ ಮುಂಗಡ ನೋಂದಣಿ ಆರಂಭ, ಇಲ್ಲಿದೆ ಮಾಹಿತಿ

 ಜಮ್ಮು: ಕಾಶ್ಮೀರದಲ್ಲಿರುವ ಅಮರನಾಥ ದೇಗುಲದ ವಾರ್ಷಿಕ ಯಾತ್ರೆಗಾಗಿ ಮುಂಗಡ ನೋಂದಣಿ ಪ್ರಕ್ರಿಯೆ ಏಪ್ರಿಲ್‌ 15ರಿಂದ ಪ್ರಾರಂಭವಾಗಲಿದೆ ಎಂದು ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಪ್ರಕಟಿಸಿದೆ.


ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಯಾತ್ರಾ ಪರವಾನಗಿಗಳನ್ನು ನೀಡಲಾಗುತ್ತದೆ.ಪ್ರತಿ ಮಾರ್ಗಕ್ಕೂ ನಿಗದಿತ ದೈನಂದಿನ ಕೋಟಾ ಇರಲಿದೆ.

ಈ ಬಾರಿ ನೋಂದಣಿಯನ್ನು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಮಾಡಲಾಗುತ್ತದೆ. ಬಯೋಮೆಟ್ರಿಕ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಮಾತ್ರ ವೆಬ್‌ಕ್ಯಾಮ್ ಮೂಲಕ ಫೋಟೊ ತೆಗೆಯುವ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ವಯೋಮಿತಿ ಮತ್ತು ನಿಯಮಗಳು

* 13ರಿಂದ 70 ವರ್ಷದೊಳಗಿನ ಭಕ್ತರು ಮಾತ್ರ ನೋಂದಣಿಗೆ ಅರ್ಹರು.

* ಆರು ವಾರಗಳಿಗಿಂತ ಹೆಚ್ಚಿನ ಅವಧಿಯ ಗರ್ಭಿಣಿಯರಿಗೆ ಆರೋಗ್ಯ ಪ್ರಮಾಣಪತ್ರವಿದ್ದರೂ ಸಹ ಯಾತ್ರೆಗೆ ಅನುಮತಿ ಇರುವುದಿಲ್ಲ.

* ಭಕ್ತರು ಅಧಿಕೃತ ವೈದ್ಯರು ಅಥವಾ ವೈದ್ಯಕೀಯ ಸಂಸ್ಥೆಗಳಿಂದ 2026ರ ಏಪ್ರಿಲ್ 8 ನಂತರ ಪಡೆದ ಕಡ್ಡಾಯ ಆರೋಗ್ಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯ.

*ಭಕ್ತರು ಬಾಲ್‌ಟಾಲ್ ಅಥವಾ ಪಹಲ್ಗಾಮ್ ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

* ಯಾವುದೇ ನಿರ್ದಿಷ್ಟ ದಿನಾಂಕದ ಯಾತ್ರೆಗೆ ಏಳು ದಿನಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.

* ಭಕ್ತರ ನೆರವಿಗಾಗಿ ಪ್ರತ್ಯೇಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ

* ಯಾತ್ರಿಕರು ನೋಂದಣಿ ಸಮಯದಲ್ಲಿ ಸರಿಯಾದ ಆಧಾರ್ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸುವಂತೆ ಹಾಗೂ ಸುಗಮ ಯಾತ್ರೆಗಾಗಿ ಮಂಡಳಿ ನೀಡಿರುವ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries