HEALTH TIPS

ಕಾಮನ್ವೆಲ್ತ್ ಯೂತ್ ಆಯಂಡ್ ಜೂನಿಯರ್ ಚಾಂಪಿಯನ್ಶಿಪ್| ನಾಲ್ಕು ಚಿನ್ನದ ಪದಕ ಗೆದ್ದ ಭಾರತೀಯ ವೇಯ್ಟ್ ಲಿಫ್ಟರ್‌ಗಳು

ನವದೆಹಲಿ: ಸಮೋವಾದ ಅಪಿಯಾದಲ್ಲಿ ಈಗ ನಡೆಯುತ್ತಿರುವ ಕಾಮನ್ವೆಲ್ತ್ ಯೂತ್ ಹಾಗೂ ಜೂನಿಯರ್ ವೇಯ್ಟ್‌ಲಿಫ್ಟಿಂಗ್‌ ಚಾಂಪಿಯನ್ಶಿಪ್ ಹಾಗೂ ಯುನಿವರ್ಸಲ್ ಕಪ್‌ನಲ್ಲಿ (ಸೀನಿಯರ್) ಭಾರತೀಯ ಲಿಫ್ಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಪರ್ಧಾವಳಿಯ ಎರಡನೇ ದಿನ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

65 ಕೆಜಿ ತೂಕದ ಪುರುಷರ ವಿಭಾಗದಲ್ಲಿ ಒಟ್ಟು 271 ಕೆಜಿ(ಸ್ನ್ಯಾಚ್ನಲ್ಲಿ 126 ಕೆಜಿ+ಕ್ಲೀನ್ ಆಯಂಡ್ ಜರ್ಕ್ನಲ್ಲಿ 145 ಕೆಜಿ)ಎತ್ತಿ ಹಿಡಿದ ಸುನೀಲ್ ಸಿಂಗ್ ಚಿನ್ನದ ಪದಕ ಜಯಿಸಿದರು.

ಮಹಿಳೆಯರ 58 ಕೆಜಿ ವಿಭಾಗದಲ್ಲಿ ಅಸಿಯನ್ ಗೊಗೊಯ್ ಹಾಗೂ ಪುರುಷರ 71 ಕೆಜಿ ವಿಭಾಗದಲ್ಲಿ ಅಭಿನವ್ ಗೊಗೊಯ್ ಚಿನ್ನದ ಪದಕ ಜಯಿಸಿದ್ದಾರೆ.

ಅಸಿಯಾನ್ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಒಟ್ಟು 185 ಕೆಜಿ(ಸ್ನ್ಯಾಚ್ನಲ್ಲಿ 79ಕೆಜಿ, ಕ್ಲೀನ್ ಆಯಂಡ್ ಜರ್ಕ್ನಲ್ಲಿ 106 ಕೆಜಿ)ತೂಕ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದರು. ಅಭಿನವ್ ಒಟ್ಟು 284 ಕೆಜಿ ಎತ್ತಿ ಹಿಡಿದು 71 ಕೆಜಿ ಪುರುಷರ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಯುನಿವರ್ಸಲ್ ಕಪ್ನಲ್ಲಿ ಅರುಣಾಚಲ ಪ್ರದೇಶದ ಚಾರು ಪೆಸಿ ಅವರು ಪುರುಷರ 65 ಕೆಜಿ ವಿಭಾಗದಲ್ಲಿ ಒಟ್ಟು 289 ಕೆಜಿ(ಸ್ನ್ಯಾಚ್ನಲ್ಲಿ 127 ಕೆಜಿ, ಕ್ಲೀನ್ ಆಯಂಡ್ ಜರ್ಕ್ನಲ್ಲಿ 162 ಕೆಜಿ)ಎತ್ತಿ ಹಿಡಿದು ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries