ನವದೆಹಲಿ: ಇರಾನ್‌ನ ಕಚ್ಚಾ ತೈಲವನ್ನು ತುಂಬಿಕೊಂಡು ಭಾರತಕ್ಕೆ ಬರುತ್ತಿದ್ದ ಅಮೆರಿಕ ಅನುಮೋದಿತ ತೈಲ ಟ್ಯಾಂಕರ್, ಹಣ ಪಾವತಿಯಲ್ಲಿನ ವ್ಯತ್ಯಯದ ಕಾರಣಕ್ಕೆ ಚೀನಾದ ಕಡೆಗೆ ತೆರಳಿದೆ.
6 ಲಕ್ಷ ಬ್ಯಾರಲ್ ಕಚ್ಚಾ ತೈಲವಿದ್ದ ಪಿಂಗ್ ಶುನ್ ಟ್ಯಾಂಕರ್ ಖಾರ್ಗ್ ದ್ವೀಪದಿಂದ ಮಾರ್ಚ್ 4ರಂದು ಹೊರಟಿತ್ತು.
ಏಪ್ರಿಲ್ 4ರಂದು ಗುಜರಾತ್‌ನ ವಾಡಿನಾರ್ ಬಂದರಿಗೆ ಬರಬೇಕಾಗಿತ್ತು.
'ಆದರೆ ಇದೀಗ ಆ ಟ್ಯಾಂಕರ್ ಚೀನಾದ ಕಡೆಗೆ ಪ್ರಯಾಣಿಸುತ್ತಿದೆ' ಎಂದು ನೌಕೆಗಳ ಚಲನವಲನ ದಾಖಲಿಸುವ ಸಂಸ್ಥೆ ಕೆಪಿಲೆರ್ ತಿಳಿಸಿದೆ.
ಮಾರಾಟಗಾರರು ಪಾವತಿ ವಿಧಾನವನ್ನು ಬದಲಾಯಿಸಿರುವುದರಿಂದ ವ್ಯವಹಾರದಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಲಾಗುತ್ತಿದೆ. ಮಾರಾಟಗಾರರು ಮತ್ತು ಖರೀದಿದಾರರು ಯಾರು ಎಂಬುವುದು ಸ್ಪಷ್ಟವಾಗಿಲ್ಲ.

