ಪಸಿಘಾಟ್ ನಿವಾಸಿಯಾದ ನಿವೃತ್ತ ಕ್ಯಾಪ್ಟನ್ ಮೊಹೊಂತೊ ಪ್ಯಾಂಗಿಂಗ್ ಅವರು ಜನಗಣತಿಯ ಅಧಿಕೃತ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಲು ಪ್ರಯತ್ನಿಸಿದಾಗ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದಿದೆ. ಈ ಜಾಲತಾಣದ ಇಂಟರ್ ಫೇಸ್ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿರುವ ಅವರ ನಗರವನ್ನು ಚೀನಾ ಗಡಿಯಲ್ಲಿರುವ ಮೆಡೋಗ್ ಎಂದು ತಪ್ಪಾಗಿ ತೋರಿಸಿದೆ.
ಈ ಲೋಪವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ಯಾಂಗಿಂಗ್, "ಮೆಡೋಗ್ ಚೀನಾದಲ್ಲಿನ ಒಂದು ಪಟ್ಟಣವಾಗಿದೆ. ಗೂಗಲ್ ನ ಸಿಇಒ ಸುಂದರ್ ಪಿಚ್ಚೈ ಭಾರತೀಯರಾಗಿದ್ದಾರೆ! ಸರ್ಕಾರದ ಅಧಿಕೃತ ಪೋರ್ಟಲ್ ಗಳೂ ಕೂಡ ನಮ್ಮ ಪ್ರಾಂತ್ಯವನ್ನು ತಪ್ಪಾಗಿ ತೋರಿಸುತ್ತಿವೆ! ಈ ಬಗ್ಗೆ ಕ್ಷಿಪ್ರ ಕ್ರಮದ ಅಗತ್ಯವಿದೆ" ಎಂದು ಆಗ್ರಹಿಸಿದ್ದರು. ಇದರ ಬೆನ್ನಿಗೇ, ಜನಗಣತಿ ಪೋರ್ಟಲ್ ನಲ್ಲಿ ಕಂಡು ಬಂದಿದ್ದ ಲೋಪವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ.

