ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆಸುಪಾಸಿನ ನಿವಾಸಿ, ದೀರ್ಘ ಕಾಲ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ರಾಧಾಕೃಷ್ಣ ಅಡಿಗ(80)ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವುದರ ಜತೆಗೆ ಕಾಸರಗೋಡು ಪೇಟೆ ಪರಿಸರದಲ್ಲಿ ವೈದಿಕ ಪೂಜಾ ಕೈಂಕರ್ಯ ನಿರತರಾಗಿದ್ದರು. ಇವರು ಪತ್ನಿ, ಪುತ್ರಿ, ಮಸ್ಕತ್‍ನ ಶಿವದೇವಾಲಯದ ಪ್ರಧಾನ ಅರ್ಚಕರಾಗಿರುವ ಪುತ್ರ ಶಂಕರನಾರಾಯಣ ಅಡಿಗ ಅವರನ್ನು ಅಗಲಿದ್ದಾರೆ.


