HEALTH TIPS

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಇಂದು ಬ್ರಹ್ಮಕಲಶಾಭಿಷೇಕ

ಕಾಸರಗೋಡು: ಭಾರತೀಯ ಸಂಸ್ಕøತಿ ಜಗತ್ತಿಗೆ ನೀಡಿದ ದೊಡ್ಡ ಸಂದೇಶ ಧರ್ಮವಾಗಿದೆ. ಇಲ್ಲಿಯ ಒಟ್ಟು ಜೀವನ ಸಂದೇಶ ಋಜು ಮಾರ್ಗದ ಬದುಕಾಗಿದೆ. ಸಮಸ್ತ ವೇದ ಸಾರ ಸಂಗ್ರಹವಾದ ಭಗವದ್ಗೀತೆ ಧರ್ಮದಿಂದ ಆರಂಭಗೊಂಡು 'ಮಮ' ಎಂಬ ತನ್ನ ಧರ್ಮದ ಬಗ್ಗೆ ಸಾರಿದೆ. ಇದರಿಂದಲೇ ಧರ್ಮವೇ ಪ್ರಧಾನವಾದುದು, ಶ್ರೇಯಸ್ಸೂ, ಪ್ರೇಯಸ್ಸೂ ನೀಡುವುದೇ ಆ ಧರ್ಮವಾಗಿದೆ ಎಂದು ಕಾಸರಗೋಡು ಮಾತಾ ಅಮೃತಾನಂದಮಯೀ ಮಠದ ಬ್ರಹ್ಮಚಾರಿ ಶ್ರೀ ವೇದ ವೇದಾಮೃತ ಚೈತನ್ಯ ಆಶೀರ್ವಚನದಲ್ಲಿ ತಿಳಿಸಿದರು.


ಕಾಸರಗೋಡು ನುಳ್ಳಿಪ್ಪಾಡಿಯ ಶ್ರೀಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಮಾತನಾಡಿದರು.

ಸಾವಿನ ನಂತರ ಕೊಂಡೊಯ್ಯುವುದು ಧರ್ಮ, ಅಧರ್ಮಗಳ ಒಟ್ಟು ಕರ್ಮ ಫಲವನ್ನಷ್ಟೇ ಆಗಿದೆ. ಈಶ್ವರ ಮನುಷ್ಯ ರೂಪದಲ್ಲಿ ಜನಿಸಿದ ಧರ್ಮಮೂರ್ತಿಗಳ ನೆಲ ಭರತಭೂಮಿಯಾಗಿದೆ. ಇಲ್ಲಿ ಜನಿಸಿರುವ ಹಿರಿಮೆಯನನು ಅರಿತು ಬದುಕನ್ನು ಸತ್ಕರ್ಮಗಳ ಮೂಲಕ ಕೃತಾರ್ಥಗೊಳಿಸಬೇಕು. ಹೊಸ ತಲೆಮಾರು ಗಂಭೀರ ಲೋಪಗಳ ಹಾದಿಯಲ್ಲಿ ಮುಂದುವರಿಯುತ್ತಿರುವುದು ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ನೆಲೆಗಟ್ಟಿನ ಸತ್ಕರ್ಮದ ಹಾದಿಯನ್ನು ಅವರಿಗೆ ಇಂತಹ ಆರಾಧನಾ ಕೇಂದ್ರಗಳ ಮೂಲಕ ಕೈದಾಟಿಸಬೇಕೆಂದು ಅವರು ಕರೆ ನೀಡಿದರು. 

ಶ್ರೀಕ್ಷೇತ್ರದ ಅಧ್ಯಕ್ಷ ಗಣೇಶ್ ಅಮೈ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಹಿಂದೂ ಸಮಾಜ ಹಲವು ವೈರುಧ್ಯಗಳನ್ನು ದಾಟಿ ಇಂದು ಈ ನೆಲೆಗೆ ಬಂದು ತಲುಪಿದೆ. ಕೇರಳದ ಸುಧಾರಕರಾದ ಚಟ್ಟಂಬಿಸ್ವಾಮಿ, ಶ್ರೀನಾರಾಯಣ ಗುರುಗಳಂತವರ ನಿರಂತರ ಚಟುವಟಿಕೆಗಳ ಮೂಲಕ ಸಮಾಜದ ಅಂಚಿನ ವರ್ಗಗಳೂ ಇಂದು ಮೇಲ್ಪಂಕ್ತಿಗೇರಲು ಸಾಧ್ಯವಾಗಿದೆ. ಮರಳಿ ಅಧಃಪತನಕ್ಕೆ ಜಾರದ ಜಾಗ್ರತೆ ನಮ್ಮಲ್ಲಿರಬೇಕು ಎಂದರು.

ಸಹಕಾರ ಭಾರತಿ ಕೇರಳ ರಾಜ್ಯಾಧ್ಯಕ್ಷ ವಕೀಲ ಕರುಣಾಕರ ನಂಬ್ಯಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಖ್ಯಾತ ಜ್ಯೋತಿಷಿ ಶಶಿಧರನ್ ಮಾಂಗಾಡ್, ಬಾಲಕೃಷ್ಣ ಗುರುಸ್ವಾಮಿ, ಜಿ.ಎಸ್.ಟಿ.ಅಧಿಕಾರಿ ಜಯರಾಜ್ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ವೈದ್ಯರುಗಳಾದ ಡಾ.ಜಯದೇವ ಕಂಗಿಲ, ಡಾ.ನಾಗರಾಜ ಭಟ್, ಕೇರಳ ಕೃಷಿ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಜಯಪ್ರಕಾಶ ನಾಯ್ಕ್ ಬಿ., ಬಾಲಕೃಷ್ಣ ನಾಯ್ಕ್ ಅಮೈ, ಎನ್.ದಿನೇಶನ್, ಗೋಪಾಲ ಗುರುಸ್ವಾಮಿ ಶುಭಾಶಂಸನೆಗೈದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕೆ.ಎಂ.ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಕೆ.ಬಿ.ವಂದಿಸಿದರು. ಕಾರ್ಯದರ್ಶಿ ಸಂಜಯ್ ಕುಮಾರ್ ನಿರೂಪಿಸಿದರು. ಬಳಿಕ ಓಂಕಾರ್ ಫ್ಯೂಶನ್ ಪೆರುಂಬಳ ತಂಡದವರಿಂದ ಫ್ಯೂಶನ್ ಭಜನ್ ನಡೆಯಿತು. 


ಇಂದು ಬ್ರಹ್ಮಕಲಶಾಭಿಷೇಕ:

ನುಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಏ. 23ರಂದು ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ,  7.34ರಿಂದ 9.37ರಮಧ್ಯೆ ವೃಷಭ ಲಗ್ನ ಶುಭಮುಹೂರ್ತದಲ್ಲಿ ಅಷ್ಟಬಂಧಲೇಪನ ಮತ್ತು ಬ್ರಹ್ಮಕಲಶಾಭಿಷೇಕ ನಡೆಯುವುದು. 11.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಶ್ರೀಗಳಿಂದ ಆಶೀರ್ವಚನ ನಡೆಯುವುದು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರದಿವ್ಯ ಉಪಸ್ಥಿತರಿರುವರು.  ಸಾಂಸ್ಕøತಿಕ ಕಾರ್ಯಖ್ರಮದ ಅಂಗವಾಗಿ ಸಂಜೆ 5ಕ್ಕೆ ಭರತನಾಟ್ಯ, ರಾತ್ರಿ 8 ಗಂಟೆಗೆ ಶ್ರೀ ರಾಮನಾಥ ಸಾಂಸ್ಕøತಿಕ ಯಕ್ಷಗಾನ ತರಬೇತಿ ಕೇಂದ್ರ, ರಾಮನಗರ,ಕೋಟೆಕಣಿ ಇವರಿಂದ ಭಸ್ಮಾಸುರ ಮೋಹಿನಿ,ಶಬರಿಮಲೆ ಶ್ರೀ ಸ್ವಾಮಿಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಏ.24 ಬೆಳಗ್ಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6ಕ್ಕೆ ದೀಪರಾಧನೆ, ತಾಯಂಬಕ, ರಾತ್ರಿ7ಕ್ಕೆ ಶ್ರೀ ದೇವರ ಉತ್ಸವ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries