HEALTH TIPS

ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಧಾರ್ಮಿಕ ಶ್ರದ್ಧಾಕೇಂದ್ರಗಳು ಹಾಗೂ ಗುರುಪೀಠಗಳು ಕಾರಣ - ಭೀಮೇಶ್ವರ ಜೋಷಿ-ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಅಭಿಮತ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಶುಕ್ರವಾರ ಪ್ರಾರಂಭವಾಗಿದ್ದು, ಎರಡನೇ ದಿನವಾದ ಶನಿವಾರ ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ಜರಗಿತು. ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಧಾರ್ಮಿಕ ಶ್ರದ್ಧಾಕೇಂದ್ರಗಳು ಹಾಗೂ ಗುರುಪೀಠಗಳು ಕಾರಣ. ದೈವಾನುಗ್ರಹವಿದ್ದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಸಲು, ಪಡೆಯಲು ಸಾಧ್ಯವಿದೆ. ತನ್ನನ್ನು ತಾನು ದೇವರಿಗೆ, ಧರ್ಮಕ್ಕೆ, ಗುರುಪೀಠಕ್ಕೆ ಸಮರ್ಪಿಸುತ್ತಾ ಪವಿತ್ರವಾದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ದೇವರ ಸಾಮೀಪ್ಯವನ್ನು ಪಡೆಯಲು ಹೃದಯ ಶುದ್ಧತೆ ಇರಬೇಕು ಎಂದರು. 


ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿದರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಉಪಸ್ಥಿತರಿದ್ದರು. ವಿಶ್ರಾಂತ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣು ಭಟ್ ಧಾರ್ಮಿಕ ಭಾಷಣ ಮಾಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ., ನ್ಯಾಯವಾದಿ ಎನ್.ಸುಬ್ರಹ್ಮಣ್ಯ ಕೊಳತ್ತಾಯ, ಉದ್ಯಮಿ ಶಿವಶಂಕರ ನೆಕ್ರಾಜೆ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ, ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಕೃಷ್ಣಯ್ಯ ಬಲ್ಲಾಳ್ ಕೊಡ್ಯಮ್ಮೆ ಅರಮನೆ, ಉದ್ಯಮಿ ಮಧುಸೂದನ ಭಟ್ ಬಾಯಾರು, ಡಾ. ಸೂರ್ಯ ಎನ್. ಶಾಸ್ತ್ರಿ, ಶ್ರೀರಾಮ ಪ್ರಸಾದ್ ಮಾತೃಪ್ಪಾಡಿ, ಜಗನ್ನಾಥ ರೈ ಪೆರಡಾಲ ಗುತ್ತು, ಪದ್ಮನಾಭ ಶೆಟ್ಟಿ ಕಾಟುಕುಕ್ಕೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮೊಕ್ತೇಸರರಾದ ಕೃಷ್ಣ ಬದಿಯಡ್ಕ ಹಾಗೂ ಸೀತಾರಾಮ ವಿ., ಈಶ್ವರ ಭಟ್ ಪೆರ್ಮುಖ, ಕೃಷ್ಣಕಾಂತ ಶೆಟ್ಟಿ ಪೆರಡಾಲಗುತ್ತು, ವೆಂಕಟ್ರಮಣ ಭಟ್ ಪೆರ್ಮುಖ ಉಪಸ್ಥಿತರಿದ್ದರು. ಡಾ. ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ನಿರಂಜನ ರೈ ಪೆರಡಾಲ ಸ್ವಾಗತಿಸಿ, ಉದಯಶಂಕರ ಪಿ.ಎಸ್. ಪೆರಡಾಲ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries