HEALTH TIPS

ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ ಆರೋಪ: ಹಾರ್ಮುಝ್‌ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ ಹೇರಿದ ಇರಾನ್ ; ವರದಿ

ಟೆಹರಾನ್: ಅಮೆರಿಕ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಹಾರ್ಮುಝ್‌ ಜಲಸಂಧಿಯಲ್ಲಿ ಇರಾನ್ ಮತ್ತೆ ನಿರ್ಬಂಧಗಳನ್ನು ಹೇರಿರುವ ಬಗ್ಗೆ ವರದಿಯಾಗಿದೆ.

ಅಮೆರಿಕ ನೌಕಾ ದಿಗ್ಬಂಧನ ಮುಂದುವರಿಸಿರುವುದರಿಂದ ಇರಾನ್ ಹಾರ್ಮುಝ್‌ ಜಲಸಂಧಿಯನ್ನು ತೆರೆಯುವ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದುಕೊಂಡಿದೆ.

ಹಾರ್ಮುಝ್‌ ಜಲಸಂಧಿಯ ನಿಯಂತ್ರಣವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದೆ ಎಂದು IRGC ಹೇಳಿದೆ. ಅದು ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಇರಾನ್‌ ಮಿಲಿಟರಿ ಕಮಾಂಡ್ ಘೋಷಿಸಿದೆ.

ಇರಾನ್ ಬಂದರುಗಳನ್ನು ಅಮೆರಿಕ ನಿರಂತರವಾಗಿ ದಿಗ್ಬಂಧನಗೊಳಿಸುತ್ತಿರುವುದರಿಂದ ಹಾರ್ಮುಝ್‌ ಜಲಸಂಧಿಯನ್ನು ನಿರ್ಬಂಧಿಸಿರುವುದಾಗಿ IRGC ಹೇಳಿದೆ. ಅಮೆರಿಕವು ದಿಗ್ಬಂಧನದ ಸೋಗಿನಲ್ಲಿ ಕಡಲ್ಗಳ್ಳತನ ಮತ್ತು ಸಮುದ್ರ ಕಳ್ಳತನದ ಕೃತ್ಯಗಳನ್ನು ಮುಂದುವರೆಸಿದೆ ಎಂದು IRGC ಆರೋಪಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries