ಬದಿಯಡ್ಕ: ಹತ್ತರ ಹರೆಯದ ಬಾಲಕಿಗೆ ಪಿನಾಯಿಲ್ ಕುಡಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕನ ವಿರುದ್ಧ ಬದಿಯಡ್ಕ ಠಾಣೆ ಪೆÇಲೀಸರು ಪೆÇೀಕ್ಸೋ ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 28ರ ಹರೆಯದ ಯುವಕನಿಗೆ ಈ ಕೇಸು. ಪಿನಾಯಿಲ್ ಸೇವಿಸಿದ ಪರಿಣಾಮ ಅಸೌಖ್ಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಯುವಕ ಬಾಲಕಿಯ ತಂದೆಯ ಸಮೀಪ ಸಂಬಂಧಿಯಾಗಿದ್ದು, ಬಾಲಕಿಯ ಮನೆಗೆ ಆಗಾಗ ಭೇಟಿನೀಡುತ್ತಿದ್ದನು. ಆದರೆ ಯುವಕನ ನಡತೆಯನ್ನು ಬಾಲಕಿ ತಂದೆ ವಿರೋಧಿಸುತ್ತಿದ್ದನು. ಈ ಸಿಟ್ಟಿನಲ್ಲಿ ಬಾಲಕಿಗೆ ಪಿನಾಯಿಲ್ ಕುಡಿಸಿದ ಬಳಿಕ ಅದನ್ನು ತಾನೂ ಕುಡಿದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು. ಆದರೆ ಬಾಲಕಿಯ ಹೊಟ್ಟೆಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ಪಿನಾಯಿಲ್ ಸೇರಿದ್ದು, ಇದರಿಂದ ಬಾಲಕಿ ಅಪಾಯದಿಂದ ಪಾರಾಗಿರಉವುದಾಧಗಿ ಮಾಹಿತಿಯಿದೆ.

