ಬದಿಯಡ್ಕ: ಕನ್ನಡ, ಮಲಯಾಳ, ಭಾಷೆ ಪ್ರಭಾವ ಇರುವ ಪ್ರದೇಶದಲ್ಲಿ ಶ್ರೇಷ್ಠವಾದ ಸಂಸ್ಕøತಿಯು ಸಮೃದ್ಧವಾಗಿದೆ. ಪ್ರಾಚೀನತೆಗೆ ಧಕ್ಕೆ ಬಾರದಂತೆ ಅತ್ಯಂತ ಸುಂದರವಾಗಿ ಪೆರಡಾಲ ಕ್ಷೇತ್ರವು ನವೀಕರಣಗೊಂಡಿದೆ. ಪ್ರಕೃತಿಯನ್ನು ಉಳಿಸಿಕೊಂಡು ಉದನೇಶ್ವರನ ಆರಾಧನೆ ನಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಮ್ ಹಂಗಾರಕಟ್ಟೆ ಬಾಳೆಕುದ್ರು ಕದಳೀಪುರ ಶ್ರೀಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮಿಗಳು ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 9ನೇ ದಿನ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಶಿವಪೂಜೆ ಎಂದರೆ ಸಮಸ್ತ ದೇವತೆಗಳ ಪೂಜೆ, ಬೇರೆ ಬೇರೆ ವಿಚಿತ್ರ ರೀತಿಯ ಆಕ್ರಮಣಗಳು ನಮ್ಮ ಹಿಂದೂಸಮಾಜದ ಮೇಲೆ ನಡೆಯುತ್ತಿದೆ. ನಮ್ಮ ಸಂಸ್ಕøತಿಯ ರಕ್ಷಣೆಗಾಗಿ ಪೂರ್ವಜರು ಹಾಕಿಕೊಟ್ಟ ಮಾರ್ಗವೇ ಧಾರ್ಮಿಕ ಕ್ಷೇತ್ರಗಳು. ಸಂಸ್ಕøತಿಯ ರಕ್ಷಣೆಗೆ ಸುಲಭದ ಮಾರ್ಗವೇ ಭಜನೆ. ಸಮಸ್ತ ಹಿಂದೂ ಸಮಾಜದ ಮನೆಗಳಲ್ಲಿ ಭಜನೆ ನಿತ್ಯ ನಡೆಯುವಂತೆ ದೇವಸ್ಥಾನಗಳಿಂದ ಪ್ರೇರಣೆಯಾಗಬೇಕು ಎಂದರು.
ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸನ್ ಪಯ್ಯನ್ನೂರು ಧಾರ್ಮಿಕ ಭಾಷಣಗೈದು, ಈಶ್ವರ ಚೈತನ್ಯವನ್ನು ಕಂಡುಕೊಂಡವರು ಭಾರತೀಯರು. ಧರ್ಮದ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ಉಣಬಡಿಸುವ ಕಾರ್ಯದಲ್ಲಿ ನಾವೆಲ್ಲ ಜೊತೆಯಾಗಬೇಕು ಎಂದರು. ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯ ಎಸ್.ನರೇಶ್ ಕುಮಾರ್, ಸಿವಿಲ್ ಇಂಜಿನಿಯರ್ ಕಂದೇಲು ಮಹಾಲಿಂಗೇಶ್ವರ ಭಟ್, ಹಿರಿಯ ಧಾರ್ಮಿಕ ಮುಂದಾಳು ಮಧುಕರ ರೈ ಕೊರೆಕ್ಕಾನ, ವೇದ ಅಧ್ಯಾಪಕ ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್, ಸ್ವದೇಶಿ ಕ್ಲಬ್ ಮತ್ತು ರೆಸಾರ್ಟ್ ನಿರ್ದೇಶಕಿ ಪದ್ಮಾವತಿ, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಲೆಕ್ಕ ಪರಿಶೋಧಕ ಈಶ್ವರ ಭಟ್ ಮಿತ್ತೂರು, ಡಾ. ಜಯಶಂಕರ ಮಾರ್ಲ ಕಡಾರುಬೀಡು ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಉದ್ಯಮಿ ರಮೇಶ್ ರಾವ್ ಕೆ, ವೈದ್ಯಾಧಿಕಾರಿ ಡಾ. ಜನಾರ್ದನ ನಾಯ್ಕ ಕಾಸರಗೋಡು, ಉದ್ಯಮಿ ವಾಸ್ತವ ವಿಟ್ಲ, ನಿವೃತ್ತ ಬ್ಯಾಂಕ್ ಪ್ರಬಂಧಕ ಉದನೇಶ್ವರ ಪ್ರಸಾದ್ ಶೇಡಿಗುಮ್ಮೆ, ಶೀನಪ್ಪ ಆಳ್ವ ವಳಮಲೆ ಪೆರಡಾಲ, ರವಿಕುಮಾರ ರೈ ಪೆರಡಾಲಗುತ್ತು, ಕೃಷ್ಣಮೂರ್ತಿ ಮಾತೃಪ್ಪಾಡಿ, ವಿನಾಯಕ ರೈ ನೆಕ್ರಾಜೆ, ಬಿಂದು ಜಯದಾಸ್, ಕೃಷ್ಣ ತಲ್ಪಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ ನಿರೂಪಣೆ ಮಾಡಿದರು. ಸಾಂಸ್ಕøತಿಕ ಸಮಿತಿ ಉಪಾಧ್ಯಕ್ಷರುಗಳಾದ ತಲ್ಪಣಾಜೆ ವೆಂಕಟ್ರಮಣ ಭಟ್ ಸ್ವಾಗತಿಸಿ, ಶಿವರಾಮ ಪಟ್ಟಾಜೆ ವಂದಿಸಿದರು.

