HEALTH TIPS

ಪೆರಡಾಲ ದೇವಸ್ಥಾನದ ವರ್ಷಾವ ಜಾತ್ರೆ ಸಂಪನ್ನ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರೆ ಮಂಗಳವಾರ ಸಮಾಪನಗೊಂಡಿತು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ಜರಗಿತು. ಏಪ್ರಿಲ್ 17 ರಂದು ಹಸಿರುವಾಣಿ ಮೆರವಣಿಗೆಯೊಂದಿಗೆ ಬ್ರಹ್ಮಕಲಶೋತ್ಸವ ಆರಂಭವಾಗಿ ಏ.28 ರಂದು ಶ್ರೀ ದೇವರ ಉತ್ಸವ, ರಾಜಾಂಗಣ ಪ್ರಸಾದ, ಶ್ರೀ ಪಿಲಿಚಾಮುಂಡಿ ದೈವದ ನರ್ತನ, ಅರಸಿನ ಹುಡಿ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಊರ ಪರವೂರ ಭಗವದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಒಟ್ಟು 12 ದಿನಗಳ ಕಾಲ ಪೆರಡಾಲ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಾಡಿನ ಅನೇಕ ಗಣ್ಯರು, ಯತಿವರ್ಯರು ಪಾಲ್ಗೊಂಡ ಸಮಾರಂಭ ಯಶಸ್ವಿಯಾಗಿ ಜರಗಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries