ಕುಂಬಳೆ: ಉಳುವಾರಿನ ಅಮಿಗೋಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ಅಖಿಲ ಭಾರತ ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತಿ ಸದಸ್ಯ ಅಝೀಝ್ ಕಳತ್ತೂರು, ಬ್ಲಾಕ್ ಪಂಚಾಯತಿ ಸದಸ್ಯೆ ನಸೀಮಾ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಪಂಚಾಯತಿ ಸದಸ್ಯರಾದ ಫಝಲ್ ಪೇರಾಲ್, ಅಬ್ಬಾಸ್ ಕೊಡ್ಯಮೆ, ರಮೇಶ್ ಭಟ್, ನಾಫಿಯಾ ಹುಸೇನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸಿ.ಪಿ.ಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ.ಸುಬೈರ್, ಮಾಜಿ ಡಿ.ವೈ.ಎಸ್.ಪಿ. ಟಿ.ಪಿ.ರಂಜಿತ್, ಶಾನವಾಸ್ ಪಾದೂರು, ಎಂ.ಅಬ್ಬಾಸ್, ಸತ್ತಾರ್ ಆರಿಕ್ಕಾಡಿ, ಬಿ.ಎ. ರೆಹಮಾನ್, ಸಿದ್ದೀಕ್ ದಂಡಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಅಮಿಗೋಸ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಪದಾಧಿಕಾರಿಗಳು ನಾಯಕರನ್ನು ಶಾಲು ಹೊದಿಸಿ ಸ್ವಾಗತಿಸಿದರು. ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಅವರು ಅತ್ಯುತ್ತಮ ವಿದೇಶಿ ಉದ್ಯಮಿ ಪ್ರಶಸ್ತಿಯನ್ನು ಅಮಿಗೋಸ್ ಕ್ಲಬ್‍ನ ಅಧ್ಯಕ್ಷರೂ ಆಗಿರುವ ರಹೀಸ್ ಅವರಿಗೆ ಹಸ್ತಾಂತರಿಸಿದರು.
ಯೂಸುಫ್ ಉಳುವಾರ್ ಸ್ವಾಗತಿಸಿ, ಯು.ಎ. ಮುಹಮ್ಮದ್ ಕುಂಞÂ ವಂದಿಸಿದರು.

.jpg)
.jpg)
.jpg)
