ನವದೆಹಲಿ: ಜೂನ್‌ನಲ್ಲಿ ನಡೆಯಲಿರುವ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ)-ನೆಟ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪೋರ್ಟಲ್ ತೆರೆದಿದೆ.
ಜೂನ್ 22ರಿಂದ 30ರವರೆಗೆ 85 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) ನಡೆಸಲು ಎನ್‌ಟಿಎ ಮುಂದಾಗಿದೆ.
ಕಿರಿಯ ಸಂಶೋಧಕ ಫೆಲೋಶಿಪ್‌ಗೆ ಅರ್ಹತೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪಿಹೆಚ್‌ಡಿ ದಾಖಲಾತಿಗೆ ಅರ್ಹತೆ ಪಡೆಯಲು ಪರೀಕ್ಷೆ ಬರೆಯಲಾಗುತ್ತದೆ.
ಏಪ್ರಿಲ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 24ರವರೆಗೂ ಲಭ್ಯ ಇರಲಿದೆ. ಜೂನ್ 10ರೊಳಗೆ ಪರೀಕ್ಷೆ ಪ್ರಕಟಿಸಲಾಗುತ್ತದೆ. ಜೂನ್ 15ರಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಾಮಾನ್ಯ ವರ್ಗಕ್ಕೆ ₹1,150, ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ₹600 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ₹325 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು https://ugcnet.nta.nic.in/ and www.nta.ac.in. ನಲ್ಲಿ ಅರ್ಜಿ ಸಲ್ಲಿಸಬಹುದು.

