HEALTH TIPS

ಪಿಟಿಐ, ಟೈಮ್ಸ್ ಆಫ್ ಇಂಡಿಯಾ, ಇಕನಾಮಿಕ್ ಟೈಮ್ಸ್ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ

 ನವದೆಹಲಿ: ತಮ್ಮ ಕಂಪೆನಿಗಳ ವಿರುದ್ಧ ಪ್ರಸಕ್ತ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಆ) ನಡೆಸುತ್ತಿರುವ ತನಿಖೆಗಳನ್ನು ಅತಿರಂಜಿತಗೊಳಿಸಿ ವರದಿಗಳನ್ನು ಪ್ರಕಟಿಸುತ್ತಿವೆಯೆಂದು ಆರೋಪಿಸಿ ಟೈಮ್ಸ್ ಆಫ್ ಇಂಡಿಯಾ, ಇಕನಾಮಿಕ್ ಟೈಮ್ಸ್ (ED) ಹಾಗೂ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿಸಂಸ್ಥೆಗಳ ವಿರುದ್ಧ ಉದ್ಯಮಿ ಅನಿಲ್ ಅಂಬಾನಿ ಅವರು ದಿಲ್ಲಿ ಹೈಕೋರ್ಟ್ನಲ್ಲಿ 2 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 


ಅನಿಲ್ ಅಂಬಾನಿ ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು, ಟೈಮ್ಸ್ ಆಫ್ ಇಂಡಿಯಾ ಹಾಗೂ ಇಕನಾಮಿಕ್ ಟೈಮ್ಸ್ ಒಡೆತನದ ಬೆನ್ನೆಟ್ ಕೋಲ್ಮನ್ ಆಯಂಡ್ ಕಂಪೆನಿ ಲಿಮಿಟೆಡ್ ಹಾಗೂ ಪಿಟಿಐ ಸುದ್ದಿಸಂಸ್ಥೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿದೆ.

ಸಂಬಂಧಪಟ್ಟ ಸುದ್ದಿ ಸಂಸ್ಥೆಗಳು ಹಾಗೂ ಪತ್ರಕರ್ತರು ಈ ಕುರಿತಾಗಿ ತಮ್ಮ ಉತ್ತರವನ್ನು ಆಗಸ್ಟ್ 24ರೊಳಗೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರು, ಮುಂದಿನ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದ್ದಾರೆ.

ತಮ್ಮ ಒಡೆತನದ ರಿಲಾಯನ್ಸ್ ಕಂಪೆನಿಗಳ ಸಾಲ ವಂಚನೆ ಪ್ರಕರಣದ ಕುರಿತಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಆ) ನಡೆಸುತ್ತಿರುವ ತನಿಖೆಗೆ ಸಂಬಂಧಿಸಿ ತಮ್ಮ ವಿರುದ್ಧ ಟೈಮ್ಸ್ ಆಫ್ ಇಂಡಿಯಾ, ಇಕನಾಮಿಕ್ ಟೈಮ್ಸ್ ಹಾಗೂ ಪಿಟಿಐ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿರುವುದಾಗಿ ಅಂಬಾನಿ ಅವರು ಅರ್ಜಿಯಲ್ಲಿ ಆಪಾದಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries