HEALTH TIPS

ಗ್ರಾಮೀಣ ಜೀವನ ಸುಧಾರಿಸಲು ರಿಲಯನ್ಸ್ ಪ್ರಯತ್ನ: 3,000 ಹಳ್ಳಿಗಳ ಚಿತ್ರಣ ಬದಲು

ನವದೆಹಲಿ: ರಿಲಯನ್ಸ್ ಫೌಂಡೇಶನ್ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್‌ಎಫ್) ಗ್ರಾಮೀಣಾಭಿವೃದ್ಧಿಯ ಬಗ್ಗೆ ಹತ್ತು ವರ್ಷಗಳ ಕೆಲಸದ ಪ್ರಮುಖ ಅಧ್ಯಯನವನ್ನು ಬಿಡುಗಡೆ ಮಾಡಿವೆ. ಈ ಅಧ್ಯಯನವು ದೇಶದ ನಾಲ್ಕು ರಾಜ್ಯಗಳ 3,000 ಹಳ್ಳಿಗಳಲ್ಲಿನ ಬದಲಾವಣೆಗಳನ್ನು ಮೌಲ್ಯಮಾಪನ ಮಾಡಿದೆ.

ಸ್ಥಳೀಯ ಸಂಸ್ಥೆಗಳು, ಜನರ ಭಾಗವಹಿಸುವಿಕೆ ಮತ್ತು ಸಹಯೋಗದ ಪ್ರಯತ್ನಗಳಿಂದ ಹಳ್ಳಿಗಳಲ್ಲಿ ಜೀವನೋಪಾಯ ಮತ್ತು ಜೀವನ ಮಟ್ಟವನ್ನು ಸುಧಾರಿಸಿವೆ ಎಂದು ಅಧ್ಯಯನದಲ್ಲಿದೆ.

ಒಡಿಶಾದ ಬಾಲಂಗೀರ್, ಮಧ್ಯಪ್ರದೇಶದ ಮಾಂಡ್ಲಾ, ಆಂಧ್ರಪ್ರದೇಶದ ಅದೋನಿ ಮತ್ತು ಗುಜರಾತ್‌ನ ರಾಧನ್ಪುರದಲ್ಲಿ ಮಾಡಿದ ಕೆಲಸಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಇದು 2,100ಕ್ಕೂ ಹೆಚ್ಚು ಕುಟುಂಬಗಳ ಜೀವನದಲ್ಲಿ ಬದಲಾವಣೆಗಳನ್ನು ಗುರುತಿಸಿದೆ.

ನೀತಿ ತಜ್ಞರು, ಸಂಶೋಧಕರು ಮತ್ತು ಅಭಿವೃದ್ಧಿ ವೃತ್ತಿಪರರು ನವದೆಹಲಿಯಲ್ಲಿ ನಡೆದ ಚರ್ಚೆಯಲ್ಲಿ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಿದರು. ಒಆರ್‌ಎಫ್‌ನ ಉಪಾಧ್ಯಕ್ಷ ಡಾ.ನೀಲಾಂಜನ್ ಘೋಷ್ ಮಾತನಾಡಿ, 'ಗ್ರಾಮೀಣಾಭಿವೃದ್ಧಿಗೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ' ಎಂದರು.

ರಿಲಯನ್ಸ್ ಫೌಂಡೇಶನ್‌ನ ಮುಖ್ಯ ಅಭಿವೃದ್ಧಿ ಅಧಿಕಾರಿ ಸುದರ್ಶನ್ ಸುಚಿ ಮಾತನಾಡಿ, "ಪರಿಹಾರಗಳನ್ನು ರಚಿಸಲು ಜನರು ಒಗ್ಗೂಡಿದಾಗ ಮತ್ತು ಸ್ಥಳೀಯ ಸಂಸ್ಥೆಗಳು ಬಲಗೊಂಡಾಗ ಹಳ್ಳಿಗಳು ಸ್ವಾವಲಂಬಿಯಾಗುತ್ತವೆ" ಎಂದು ಅಭಿಪ್ರಾಯಪಟ್ಟರು.

ರಿಲಯನ್ಸ್ ಫೌಂಡೇಶನ್‌ನ ಗ್ರಾಮೀಣ ಪರಿವರ್ತನೆ ಕಾರ್ಯಕ್ರಮದ ಮುಖ್ಯಸ್ಥ ಅಭಿನವ್ ಸೇನ್ ಮಾತನಾಡಿ, "ಡೇಟಾ, ಕೃತಕ ಬುದ್ಧಿಮತ್ತೆ ಮತ್ತು ಜನರ ಭಾಗವಹಿಸುವಿಕೆಯ ಮೂಲಕ ಗ್ರಾಮ ಪಂಚಾಯಿತಿಗಳನ್ನು ಮತ್ತಷ್ಟು ಬಲಪಡಿಸಬಹುದು" ಎಂದು ಹೇಳಿದರು.

ಮಹಿಳೆಯರು ಮತ್ತು ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಪರಿಸರ ಸಂರಕ್ಷಣೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯ ಬಗ್ಗೆಯೂ ಚರ್ಚೆಯಲ್ಲಿ ಒತ್ತು ನೀಡಲಾಯಿತು. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಕ್ರೀಡೆಯಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ರಿಲಯನ್ಸ್ ಫೌಂಡೇಶನ್ ಇದುವರೆಗೆ ದೇಶಾದ್ಯಂತ 9.7 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries