HEALTH TIPS

ಮೇ.30ರಂದು ಏಶ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್‌ ಫೋಗಟ್‌ಗೆ ದಿಲ್ಲಿ ಹೈಕೋರ್ಟ್ ಅವಕಾಶ

 ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮೇ 30 ರಂದು ನಿಗದಿಯಾಗಿರುವ 2026ರ ಏಶ್ಯನ್ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್‌ಗೆ ದಿಲ್ಲಿ ಹೈಕೋರ್ಟ್ ಅವಕಾಶ ನೀಡಿದೆ.


ಹೈಕೋರ್ಟ್ ತನ್ನ ಆದೇಶದಲ್ಲಿ ಕುಸ್ತಿಪಟು ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸಿರುವ ಭಾರತೀಯ ಕುಸ್ತಿ ಒಕ್ಕೂಟವನ್ನು ಟೀಕಿಸಿತು.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು ಟ್ರಯಲ್ಸ್‌ಗಳನ್ನು ವೀಡಿಯೊ ರೆಕಾರ್ಡ್ ಮಾಡಬೇಕೆಂದು ನಿರ್ದೇಶಿಸಿತು. ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ)ನಿಂದ ಇಬ್ಬರು ಸ್ವತಂತ್ರ ವೀಕ್ಷಕರನ್ನು ನಾಮನಿರ್ದೇಶನ ಮಾಡಲು ಆದೇಶಿಸಿತು.

ವಿನೇಶ್ ಫೋಗಟ್ 57 ಕೆಜಿ ವಿಭಾಗದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಡೋಪಿಂಗ್ ವಿರೋಧಿ ನಿಯಮಗಳ ಅಡಿಯಲ್ಲಿ ನಿವೃತ್ತಿಯಿಂದ ಹಿಂತಿರುಗುವ ಕ್ರೀಡಾಪಟುಗಳಿಗೆ ಸಂಬಂಧಿಸಿದ ಕಡ್ಡಾಯ ಆರು ತಿಂಗಳ ನೋಟಿಸ್ ಅವಧಿಯನ್ನು ಉಲ್ಲೇಖಿಸಿ, ಜೂನ್ 26,2026ರ ತನಕ ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಫೋಗಟ್ ಅನರ್ಹ ಎಂದು ಡಬ್ಲ್ಯುಎಫ್‌ಐ ಘೋಷಿಸಿತ್ತು. ಆದರೆ ಇದನ್ನು ದಿಕ್ಕರಿಸಿದ ವಿನೇಶ್ ಫೋಗಟ್, ಗೊಂಡಾದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಶ್ರೇಯಾಂಕ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries