ಅಮೆರಿಕದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ 'ಇಂಡಿಯಾ ಎನರ್ಜಿ ಆಯಂಡ್ ಕ್ಲೈಮೇಟ್ ಸೆಂಟರ್'ನಲ್ಲಿ ಸಂಶೋಧಕರಾಗಿರುವ ಪಿಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್ ತಮ್ಮ ಸಂಶೋಧನೆಯಲ್ಲಿ ಈ ವಿಷಯವನ್ನು ಕಂಡುಕೊಂಡಿದ್ದಾರೆ.
ಉಷ್ಣತೆಗೆ ಸಂಬಂಧಿಸಿದ ಮರಣ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ ಎನ್ನುವುದನ್ನು ಜಾಗತಿಕ ಅಧ್ಯಯನಗಳು ಎತ್ತಿ ತೋರಿಸಿದರೂ, ಭಾರತದಲ್ಲಿ ಬಿಸಿಗಾಳಿಯು ಮರಣ ಪ್ರಮಾಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸುವ ನಿಖರವಾದ ಜಿಲ್ಲಾವಾರು ದತ್ತಾಂಶ ಸಾಮಾನ್ಯ ಸಂಶೋಧಕರಿಗೆ ಇಂದಿಗೂ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಒಂದು ದಿನದ ತೀವ್ರ ಶಾಖವು ರಾಷ್ಟ್ರಮಟ್ಟದಲ್ಲಿ ಸುಮಾರು 3,400 ಹೆಚ್ಚುವರಿ ಸಾವುಗಳಿಗೆ ಕಾರಣವಾಗುತ್ತದೆ. ಐದು ದಿನಗಳ ಬಿಸಿಗಾಳಿಯು ಸುಮಾರು 30,000 ಸಾವುಗಳಿಗೆ ಕಾರಣವಾಗುತ್ತದೆ ಎಂದು ನಾವು ಅಂದಾಜಿಸಿದ್ದೇವೆ ಎಂದು 'ಫ್ರಂಟಿಯರ್ಸ್ ಇನ್ ಎನ್ವಿರಾನ್‌ಮೆಂಟಲ್ ಹೆಲ್ತ್' ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ಲೇಖಕರು ಬರೆದಿದ್ದಾರೆ.

