ವಾಷಿಂಗ್ಟನ್ : ಇರಾನ್ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ 42 ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ನಾಶವಾಗಿವೆ ಅಥವಾ ಹಾನಿಗೊಂಡಿವೆ.
ಹಾನಿಗೊಂಡಿರುವ ಅಥವಾ ನಾಶವಾಗಿರುವ ಯುದ್ಧವಿಮಾನಗಳ ಸಂಖ್ಯೆಯಲ್ಲಿ ಪರಿಷ್ಕರಣೆಯಾಗಬಹುದು ಎಂದು 'ಕಾಂಗ್ರೆಸ್‌ನಲ್ ರಿಸರ್ಚ್ ಸರ್ವೀಸ್'(ಸಿಆರ್‌ಎಸ್) ವರದಿ ತಿಳಿಸಿದೆ.
ನಾಲ್ಕು ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನ, ಏಳು ಕೆಸಿ-135 ಸ್ಟ್ರಾಟೊಟ್ಯಾಂಕರ್ ಇಂಧನ ಮರುಪೂರೈಕೆ ಯುದ್ಧವಿಮಾನ, ಎರಡು ಎಂಸಿ-130 ಜೆ ಕಮಾಂಡೊ II ವಿಶೇಷ ಕಾರ್ಯಾಚರಣಾ ವಿಮಾನ, ತಲಾ ಒಂದು ಎಫ್-35ಎ ಲೈಟನಿಂಗ್ II ಯುದ್ಧ ವಿಮಾನ, ಎ-10 ತಂಡರ್‌ಬೋಲ್ಟ್ II ಗ್ರೌಂಡ್ ಅಟ್ಯಾಕ್ ಯುದ್ಧವಿಮಾನ, ಇ-3 ಸೆಂಟ್ರಿ ಎಡಬ್ಲ್ಯುಎಸಿಎಸ್ ಯುದ್ಧವಿಮಾನ, ಎಚ್‌ಎಚ್-60ಡಬ್ಲ್ಯು ಜಾಲಿ ಗ್ರೀನ್ II ಹೆಲಿಕಾಪ್ಟರ್ ಹಾಗೂ 24 ಎಂಕ್ಯು-9 ರೀಪರ್ ಡ್ರೋನ್‌ಗಳು ಮತ್ತು ಒಂದು ಎಂಕ್ಯು-4ಸಿ ಟ್ರಿಟಾನ್ ಡ್ರೋನ್ ನಾಶ ಅಥವಾ ಹಾನಿಗೊಂಡಿವೆ.
ಮೇ 12ರಂದು ನಡೆದ ಸಂಸತ್ತಿನ ಉಪಸಮಿತಿಯೊಂದರ ವಿಚಾರಣೆ ವೇಳೆ, 'ಇರಾನ್ ವಿರುದ್ಧ ಕಾರ್ಯಾಚರಣೆಯಿಂದಾಗಿ ಇಲಾಖೆಯ ವೆಚ್ಚ 29 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರಲ್ಲಿ ಬಹುಪಾಲು ಹಣ ಉಪಕರಣಗಳ ದುರಸ್ತಿ ಮತ್ತು ಬದಲಾವಣೆಗೆ ವೆಚ್ಚವಾಗಿದೆ' ಎಂದು ಪೆಂಟಗಾನ್ ಹೇಳಿತ್ತು.

