ವಾಷಿಂಗ್ಟನ್: ಕ್ಯೂಬಾದ ಜಲಪ್ರದೇಶದಲ್ಲಿ ನಾಗರಿಕ ವಿಮಾನವೊಂದನ್ನು ಹೊಡೆದುರುಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಶಕಗಳ ಬಳಿಕ ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಅವರನ್ನು ತಪ್ಪಿತಸ್ಥ ಎಂದು ಅಮೆರಿಕದ ನ್ಯಾಯಾಲಯ ತೀರ್ಪು ನೀಡಿದೆ. ಕ್ಯೂಬಾ ಮೂಲದ ಅಮೆರಿಕನ್ ಪ್ರಜೆ ಮೃತಪಟ್ಟಿದ್ದ ಈ ಪ್ರಕರಣ ಅಮೆರಿಕ ಮತ್ತು ಕ್ಯೂಬಾ ನಡುವಿನ ಸಂಬಂಧದ ಅತ್ಯಂತ ವಿವಾದಾತ್ಮಕ ಘಟನೆ ಎನಿಸಿತ್ತು.
ಅಮೆರಿಕದ ನ್ಯಾಯಾಂಗ ಇಲಾಖೆ ಬುಧವಾರ 94 ವರ್ಷ ವಯಸ್ಸಿನ ಕ್ಯಾಸ್ಟ್ರೋ ವಿರುದ್ಧದ ಆರೋಪಗಳನ್ನು ಘೋಷಿಸಿದ್ದು, ಅಮೆರಿಕದ ಪ್ರಜೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದು, ಹತ್ಯೆ ಮತ್ತು ವಿಮಾನ ನಾಶಪಡಿಸಿದ ಆರೋಪ ಹೊರಿಸಲಾಗಿದೆ. ಕ್ಯೂಬಾದಿಂದ ಗಡೀಪಾರದ ಒಂದು ಗುಂಪನ್ನು ರಕ್ಷಿಸಲು ಸಹೋದರರು ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನದ ಮೇಲೆ 1996ರಲ್ಲಿ ದಾಳಿ ನಡೆದಿತ್ತು.
ಈ ಘಟನೆ ನಡೆದ ಸಂದರ್ಭದಲ್ಲಿ ಕ್ಯಾಸ್ಟ್ರೋ, ಸಹೋದರ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಸರ್ಕಾರದಲ್ಲಿ ಕ್ಯೂಬಾದ ರಕ್ಷಣಾ ಸಚಿವರಾಗಿ ಹಾಗೂ ಮಿಲಿಟರಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅಮೆರಿಕದ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರು ಕ್ಯಾಸ್ಟ್ರೋ ವಿರುದ್ಧ ಹತ್ಯೆ ಸೇರಿದಂತೆ ಹಲವು ಆರೋಪಗಳನ್ನು ಪ್ರಕಟಿಸಿದರು.
ಕ್ಯೂಬಾದಿಂದ ಗಡೀಪಾರಾದ ಸಮುದಾಯದ ಜತೆ ನಿಕಟ ಸಂಬಂಧ ಹೊಂದಿರುವ ಮಿಯಾಮಿ ಫ್ರೀಡಂ ಟವರ್‌ನ ಹೊರಗೆ ಹಾಗೂ ಸಾಮಾನ್ಯವಾಗಿ ಎಲ್ಲೀಸ್ ಐಲ್ಯಾಂಡ್ ಆಫ್ ದ ಸೌತ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಈ ಘೋಷಣೆ ಮಾಡಲಾಯಿತು. ಈ ಘಟನೆ ಕ್ಯೂಬಾದ ಸ್ವಾತಂತ್ರ್ಯ ದಿನವಾದ ಮೇ 20ರಂದು ನಡೆದಿದ್ದು, ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ ಹರ್ಷೋದ್ಗಾರ ಮಾಡಿದರು. ದಾಳಿಯಲ್ಲಿ ಮೃತಪಟ್ಟ ನಾಲ್ವರು ಪ್ರಜೆಗಳಿಗೆ ಅಮೆರಿಕ ಅಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

