ನವದೆಹಲಿ: 'ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸಬೇಕು. ಯಾಕೆಂದರೆ, ಎಸ್‌ಐಆರ್ ಮೂಲಕ ನಿಜವಾದ ಮತದಾರರು ಮತದಾನ ಮಾಡದಂತೆ ತಡೆಯಲಾಗುತ್ತಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಗುರುವಾರ ಅಭಿಪ್ರಾಯಪಟ್ಟರು.
ಪತ್ರಕರ್ತರೊಂದಿಗೆ ಮಾತನಾಡಿ, 'ಜ್ಞಾನೇಶ್ ಕುಮಾರ್ ಅವರಿಗೂ ಹಿಂದಿನ ಕೆಲವು ಮುಖ್ಯ ಚುನಾವಣಾ ಆಯುಕ್ತರ ಕಾಲದಿಂದಲೇ ಆಯೋಗವು ಕೊಳೆಯಲು ಆರಂಭಿಸಿತ್ತು.
ಈ ಮನುಷ್ಯ ವಸ್ತುನಿಷ್ಠವಾಗಿಲ್ಲ. ಆದ್ದರಿಂದ ಮತದಾನದ ಹಕ್ಕಿಗೆ ಕುತ್ತು ಬಂದಿದೆ. ಮತದಾನ ಈಗ ಶಾಸನಬದ್ಧ ಹಕ್ಕು ಮಾತ್ರ. ಇದನ್ನು ಸಂವಿಧಾನಬದ್ಧ ಮೂಲಭೂತ ಹಕ್ಕನ್ನಾಗಿಸಲು ಇದು ಸೂಕ್ತ ಕಾಲ ಎಂದೆನಿಸುತ್ತದೆ' ಎಂದರು.

