ಕುಂಬಳೆ: ಕಾಸರಗೋಡು ಸಂಘ ಜಿಲ್ಲೆ ಪ್ರಚಾರ ವಿಭಾಗದ ವತಿಯಿಂದ ನಾರಾಯಣ ಮಂಗಲ ಶ್ರೀ ಚೀರುಂಬ ಭಗವತಿ ಕ್ಷೇತ್ರದ ಸಭಾಂಗಣದಲ್ಲಿ ನಡೆದ ಪ್ರಬುದ್ಧ ಕಾರ್ಯಕರ್ತ ಸಮಾವೇಶದಲ್ಲಿ ಸಂಘದ ಹಿರಿಯ ಕಾರ್ಯಕರ್ತ ದಿ. ಗೋಪಾಲ ಚೆಟ್ಟಿಯಾರ್ ಅವರ ಸಂಘಕಾರ್ಯದ ಪ್ರೇರಣಾದಾಯಿ ಶೈಲಿಯನ್ನು ವಿವರಿಸುವ ಕಿರುಹೊತ್ತಗೆ `ಗೋಪಾಲ ಗಾಥೆ' ಯ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ತರ್, ಬದಿಯಡ್ಕ ಖಂಡ್ ಸಂಘಚಾಲಕ ರಮೇಶ ಕಳೇರಿ, ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಕರಾವಳಿ ಕಲ್ಯಾಣ ಪರಿಷತ್ ಸಂಯೋಜಕ ಅಶೋಕ ಬಾಡೂರು, ಪುಸ್ತಕದ ಲೇಖಕ ಪುಂಡರೀಕಾಕ್ಷ ಬೆಳ್ಳೂರು ಉಪಸ್ಥಿತರಿದ್ದರು. ಲಕ್ಷ್ಮಣ ಅಡೂರು ಸ್ವಾಗತಿಸಿ, ಬಾಲಕೃಷ್ಣ ಏಣಿಯರ್ಪು ನಿರೂಪಿಸಿದರು. ಕು. ತಸ್ಮಯ್ ಬದಿಯಡ್ಕ, ಕು. ವರ್ಷಾ ಸೂರಂಬೈಲು ಗೀತೆ ಹಾಡಿದರು. ಗಣೇಶ್ ಪಿ. ಎಂ. ಮುಂಡಾನ್ತಡ್ಕ ಪುಸ್ತಕದ ಬೆನ್ನುಡಿ ವಾಚಿಸಿ, ರಾಹುಲ್ ಪಾಯಿಚಾಲು ವಂದಿಸಿದರು.

.jpg)
.jpg)
