ಪಡನ್ನ(ಕಾಸರಗೋಡು): ತ್ರಿಕರಿಪುರ ಕ್ಷೇತ್ರದಲ್ಲಿ ಸಂದೀಪ್ ವಾರಿಯರ್ ಅವರ ಗೆಲುವಿನ ಪೋಸ್ಟರ್ ಅನ್ನು ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ್ದಕ್ಕಾಗಿ ಸಿಪಿಎಂನ ಮಾಜಿ ಶಾಖಾ ಕಾರ್ಯದರ್ಶಿಯ ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆಯಲಾಗಿದೆ. ಪಡನ್ನದ ವಡಕ್ಕಾಡ್‍ನಲ್ಲಿ ಕಟ್ಟಡ ನಿರ್ಮಾಣ ಕೆಲಸಗಾರ ವಡಕ್ಕಾಡ್‍ನ ಕೆ.ಪಿ. ಬಾಬು (46) ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಬುಧವಾರ ರಾತ್ರಿ ತೆಕ್ಕಾಡ್ ಸರ್ಕಲಲ್ಲಿ ಸುಮಾರು ಐದು ಸಿಪಿಎಂ ಕಾರ್ಯಕರ್ತರು ಅವರ ಬೈಕ್ ತಡೆದು ನಿಲ್ಲಿಸಿ ಅವರನ್ನು ಥಳಿಸಿದ್ದಾರೆ ಎಂದು ಚಂದೇರ ಪೋಲೀಸರಿಗೆ ದೂರು ನೀಡಲಾಗಿದೆ.

