HEALTH TIPS

ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಸ್ಥಳಾಂತರಕ್ಕೆ ಯತ್ನ-ಕೆಎಸ್‍ಟಿಎ ವಿರೋಧ

ಕಾಸರಗೋಡು: ಪೂರ್ವನಿಗದಿಯಂತೆ ಕಾಸರಗೋಡು ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲುದ್ದೇಶಿಸಿದ್ದ ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ಏಕಾಏಕಿ ಕೈಕ್ಕೊಟ್ಟು ಕಡವು ಶಾಲೆಗೆ ಸ್ಥಳಾಂತರಿಸಲು ನಡೆಸಿರುವ ಯತ್ನ ಕೈಬಿಡುವಂತೆ ಕೆಎಸ್‍ಟಿಎ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ.

ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್ 1ರಂದು ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ನಡೆಸುವ ಬಗ್ಗೆ ಡಿಜಿಇ ನಿರ್ದೇಶ ಪ್ರಕಾರ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಆದೇಶ ಹೊರಡಿಸಿದ್ದು, ಈ ಬಗ್ಗೆ ಸಿದ್ಧತಾಕಾರ್ಯವನ್ನೂ ಪೂರ್ತಿಗೊಳಿಸಲಾಗಿದೆ. 

ಮೇ 25ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು  ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶೋತ್ಸವ ನಡೆಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಛಾಯೋತ್ ಜನಪರ ಸಮಿತಿಯನ್ನು ರಚಿಸಿ ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ  ತ್ರಿಕರಿಪುರ ಶಾಸಕ ಮತ್ತು ಸರ್ಕಾರ ಪರ ಶಿಕ್ಷಕರ ಸಂಘದ ರಾಜಕೀಯ ತಂತ್ರಗಾರಿಕೆ ಫಲವಾಗಿ ಚಾಯೋತ್ ಸರ್ಕಾರಿ ಪ್ರೌಢಶಾಲೆಯಿಂದ ಕೈಕೊಟ್ಟುಕಡವು ಶಾಲೆಗೆ ವರ್ಗಾಯಿಸಲು ಯತ್ನಿಸುತ್ತಿರುವುದು ಖಂಡನೀಯ.

ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ. ಸರ್ಕಾರ ಬದಲಾವಣೆಯ ಆರಂಭಿಕ ದಿನಗಳಲ್ಲಿಶಿಕ್ಷಣ ಸಚಿವರು ಮತ್ತು ಐಕ್ಯರಂಗ ನೇತಾರರು ಶಾಲಾ ಮೈದಾನವನ್ನು ಸಣ್ಣ ರಾಜಕೀಯ ಆಟಗಳಿಗೆ ವೇದಿಕೆಯಾಗಿ ಬಳಸಲು ಮುಂದಾಗುತ್ತಿದೆ.  ಕೇರಳದಲ್ಲಿ ಜನಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ನಾಶಮಾಡುವ ಕ್ರಮದ ವಿರುದ್ಧ ಜನಸಾಮಾನ್ಯರು ಧ್ವನಿಯೆತ್ತುವಂತೆ ಕೆಎಸ್‍ಟಿಎ ಕಾಸರಗೋಡು ಜಿಲ್ಲಾ ಸಮಿತಿ ಕರೆ ನೀಡಿದೆ.


 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries