HEALTH TIPS

ತೃತೀಯ ಲಿಂಗಿಗಳ ತಿದ್ದುಪಡಿ ಕಾಯ್ದೆ: ಕೇಂದ್ರ, ರಾಜ್ಯಗಳ ಅಭಿಪ್ರಾಯ ಕೋರಿದ ಸುಪ್ರೀಂ ಕೋರ್ಟ್

ನವದೆಹಲಿ: ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ಗಳನ್ನು ನೀಡಿದೆ.

ತೃತೀಯ ಲಿಂಗಿಗಳ ಮಾನ್ಯತೆ, ಹಕ್ಕುಗಳು ಮತ್ತು ರಕ್ಷಣೆಗೆ ಸಂಬಂಧಿಸಿದ ಕಾನೂನು ವ್ಯವಸ್ಥೆಗೆ ನೂತನ ತಿದ್ದುಪಡಿಯು ಆಮೂಲಾಗ್ರ ಬದಲಾವಣೆಗಳನ್ನು ತಂದಿದೆ.

ಆದರೆ, ನೂತನ ಕಾನೂನಿನ ಜಾರಿಗೆ ತಡೆ ನೀಡಲು ತಾನು ಉದ್ದೇಶಿಸಿಲ್ಲ ಎಂಬುದಾಗಿ ಮುಖ್ಯ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠವೊಂದು ಸ್ಪಷ್ಟಪಡಿಸಿದೆ.

''ನೋಟಿಸ್ ಹೊರಡಿಸಿ. ಎಲ್ಲಾ ರಾಜ್ಯಗಳಿಗೆ ಅವುಗಳ ಅಡ್ವೊಕೇಟ್ ಜನರಲ್‌ಗಳ ಮೂಲಕ ನೋಟಿಸ್ ಜಾರಿಯಾಗಲಿ. ಈ ಅರ್ಜಿಯನ್ನು ಮೊದಲು ಮೂವರು ನ್ಯಾಯಾಧೀಶರ ಪೀಠದ ಮುಂದೆ ಇಡಲಾಗುವುದು. ಈ ಪೀಠವನ್ನು ಮುಖ್ಯ ನ್ಯಾಯಾಧೀಶರು ರಚಿಸುತ್ತಾರೆ. ಮಧ್ಯಂತರ ಆದೇಶವಾಗಲಿ, ಮಧ್ಯಂತರ ತಡೆಯಾಗಲಿ ನೀಡುವಂತಿಲ್ಲ'' ಎಂದು ನ್ಯಾಯಪೀಠ ಹೇಳಿದೆ.

ತಿದ್ದುಪಡಿ ಕಾನೂನಿಗೆ ಮಾರ್ಚ್ 31ರಂದು ರಾಷ್ಟ್ರಪತಿ ಅಂಕಿತ ಬಿದ್ದಿತ್ತು. ಈ ಕಾನೂನು 2019ರ ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಗೆ ತಿದ್ದುಪಡಿಗಳನ್ನು ತಂದಿದೆ. ತೃತೀಯ ಲಿಂಗಿಯ ವ್ಯಾಖ್ಯಾನವನ್ನು ತಿದ್ದುಪಡಿ ಕಾನೂನು ಬದಲಾಯಿಸಿದೆ. ಶರೀರಕ್ಕೆ ಹಾನಿ ಮಾಡಿ ಬಲವಂತದಿಂದ ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡಿರುವುದು ಮುಂತಾದ ಗಂಭೀರ ಅಪರಾಧಗಳ ಶಿಕ್ಷೆಯನ್ನು ಹೆಚ್ಚಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries