ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ವಾರ್ಷಿಕ ಧರ್ಮನೇಮೋತ್ಸವ ಮಂಗಳವಾರ ಮತ್ತು ಬುಧವಾರ ನೆರವೇರಿತು.
ಮಂಗಳವಾರ ರಾತ್ರಿ ಶ್ರೀದೇವರ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್, ಧರ್ಮ, ಬುಧವಾರ ಮುಂಜಾನೆ ಈರ್ವರು ಉಳ್ಳಾಕ್ಲು ದೈವಗಳ ನೇಮ, ಪ್ರಸಾದ ವಿತರಣೆ, ಒಂಜಿ ಕುಂದು ನಲ್ವತ್ತೊಂಬತ್ತು ದೈವಗಳ ಕೋಲ, ಶ್ರೀಧೂಮಾವತಿ ದೈವಕೋಲ, ಪ್ರಸಾದ ವಿತರಣೆ, ಬಳಿಕ ಧರ್ಮದೈವ ಪಂಜುರ್ಲಿ ದೈವಗಳ ಕೋಲ, ಪ್ರಸಾದ ವಿತರಣೆ ನಡೆಯಿತು.
ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶ್ ಭಟ್ ಪುದುಕೋಳಿ, ಶಂಕರ ಭಟ್ ಪರಕ್ಕಾಲು, ಗೋವಿಂದ ಭಟ್ ಪರಕ್ಕಾಲು,ಕೃಷ್ಣಮೂರ್ತಿ ಪುದುಕೋಳಿ ಮೊದಲಾದವರು ನೇತೃತ್ವ ವಹಿಸಿದ್ದರು. ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.

.jpg)
.jpg)
.jpg)
