ಬದಿಯಡ್ಕ: ಬಾರ ಶ್ರೀ ವಣ್ಣಾರತ್ ಭಗವತಿ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮುತ್ತುಕೊಡೆ ಮತ್ತು ಶಂಕನಾದದೊಂದಿಗೆ ಬಾರ ಶ್ರೀ ವಣ್ಣಾರತ್ ಭಗವತಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಹಸಿರುವಾಣಿ ಹೊರೆಕಾಣಿಕೆ ಸಮಾರಂಭವನ್ನು ತರವಾಡು ಸ್ಥಾನಿಕ ಮನೋಜ್ ತಚ್ಚಂಗಾಡ್ ದೀಪ ಬೆಳಗಿ ಚಾಲನೆ ನೀಡಿದರು.
ಬಳಿಕ ಆಗಮಿಸಿದ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಶ್ರೀ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಧಾರ್ಮಿಕ ಸಭೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಆಚರಣಾ ಸಮಿತಿಯ ಅಧ್ಯಕ್ಷ ಕುಂಞÂ್ಞ ಕೃಷ್ಣನ್ ನಾಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಮನೋಜ್ ತಚ್ಚಂಗಾಡ್, ತರವಾಡು ಪ್ರಧಾನ ಕಾರ್ಯದರ್ಶಿ ಕೆ.ವಿ.ಸುಕುಮಾರನ್ ಎಡನೀರು, ವಕೀಲ. ಎ.ಬಾಲಕೃಷ್ಣನ್ ನಾಯರ್, ಪ್ರಧಾನ ಕಾರ್ಯದರ್ಶಿ ಅಂಜುರೂರು ನಾಯರ್ ಮಹಾಸಭಾ ಕೀಜೂರು, ಶಿವರಾಮನ್ ಮೇಸ್ತ್ರಿ, ನಾರಾಯಣನ್ ಚೆರುಟ್ಟ ಉಪಸ್ಥಿತರಿದ್ದರು. ಅಖಿಲೇಶ್ ನಗುಮುಗಂ ನೆಟ್ಟಣಿಗೆ ಸ್ವಾಗತಿಸಿ ಎಂ.ಬಾಲಕೃಷ್ಣನ್ ನಾಯರ್ ಮಳಿಯಕ್ಕಲ್ ವಂದಿಸಿದರು. ಸಂಜೆ 6.30ಕ್ಕೆ ಬ್ರಹ್ಮಶ್ರೀ ಅರವತ್ ಕೆ.ಯು.ಪದ್ಮನಾಭ ತಂತ್ರಿಗಳನ್ನು ಬಾರಾ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು.

.jpg)
.jpg)
