HEALTH TIPS

ವಿರಾಟ್‌ ಕೊಹ್ಲಿ ಸಹಿ ಮಾಡಿದ ಬ್ಯಾಟ್‌ ಉಡುಗೊರೆಯಾಗಿ ಪಡೆದ ವಿಜಯ್

 ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್ ಅವರಿಗೆ ಎಂಆರ್‌ಎಫ್ ಟಯರ್ ಕಂಪನಿಯ ಅಧ್ಯಕ್ಷ ಕೆ.ಎಂ. ಮ್ಯಾಮೆನ್ ಅವರು ವಿರಾಟ್ ಕೊಹ್ಲಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.


ಶುಕ್ರವಾರ ಕಂಪನಿಯ ಪ್ರತಿನಿಧಿಗಳು ವಿಜಯ್‌ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಪ್ರಸ್ತಾಪಿತ ₹5,300 ಕೋಟಿ ವೆಚ್ಚದ ಗ್ರೀನ್‌ಫೀಲ್ಡ್ ಉತ್ಪಾದನಾ ಘಟಕದ ಕುರಿತು ಪ್ರಮುಖ ಚರ್ಚೆಗಳು ನಡೆದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊದಲ್ಲಿ, ವಿಜಯ್‌ ಅವರು ಸೂಟ್‌ ಧರಿಸಿದ್ದು, ಅಂಗವಸ್ತ್ರವೊಂದನ್ನು ಹೆಗಲ ಮೇಲೆ ಹಾಕಿಕೊಂಡು ಕೊಹ್ಲಿ ಸಹಿ ಮಾಡಿರುವ ಬ್ಯಾಟ್‌ನೊಂದಿಗೆ ಪೋಸ್‌ ನೀಡಿದ್ದಾರೆ.

ನಟನೆಯ ಜೊತೆಗೆ ವಿಜಯ್‌ ಅವರಿಗೆ ಕ್ರಿಕೆಟ್‌ನಲ್ಲೂ ಆಸಕ್ತಿಯಿದ್ದು, 2008 ರಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದರು.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿರುವ ಅವರ ಪಕ್ಷ ಟಿವಿಕೆ ಎಲ್ಲರ ಗಮನ ಸೆಳೆದಿತ್ತು. ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಮೇ 10 ವಿಜಯ್‌ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries