ರಾಜ್ಯಪಾಲ ಥಾವತ್ ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದು, ಇನ್ನು ಒಂದು ಪುಟದ ರಾಜೀನಾಮೆ ಪತ್ರವನ್ನು ಪ್ರಭುಶಂಕರ್ ಅವರು ಸ್ವೀಕರಿಸಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯನವರ ಮೂರು ವರ್ಷದ ಆಡಳಿತ ಅಂತ್ಯವಾಗಿದೆ.
ಈ ವೇಳೆ ಪ್ರಭುಶಂಕರ್ ಅವರು ರಾಜೀನಾಮೆ ಪತ್ರ ಸ್ವೀಕಾರ ಶಿಷ್ಟಾಚಾರದ ಬಗ್ಗೆ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಕೊಟ್ಟರು. ನಾಳೆ (ಮೇ 29) ಸಂಜೆ ವೇಳೆಗೆ ರಾಜ್ಯಪಾಲರು ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಹೀಗಾಗಿ ತಾವು ಮತ್ತೊಮ್ಮೆ ಬಂದು ರಾಜ್ಯಪಾಲರನ್ನು ಭೇಟಿಯಾಗಬೇಕು ಎಂದಿದ್ದಾರೆ.

