HEALTH TIPS

ಇಸ್ರೇಲ್ ದಾಳಿಯಲ್ಲಿ ಹಮಾಸ್ ಸೇನಾ ಮುಖ್ಯಸ್ಥ ಹದ್ದಾದ್ ಸಾವು

 ಕೈರೊ: ಇಸ್ರೇಲ್ ಸೇನೆಯು ತಮ್ಮನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ ಎಂದು ಘೋಷಿಸಿದ್ದ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಅಲ್-ದಿನ್ ಅಲ್-ಹದ್ದಾದ್, ಮರುದಿನವೇ ಮೃತಪಟ್ಟಿದ್ದಾರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದಕ್ಕೂ ಮುನ್ನ, ಗಾಜಾ ನಗರದ ಮಸೀದಿಗಳು ಇಜ್ ಹದ್ದಾದ್ ಅವರು ಸಾವಿಗೀಡಾಗಿರುವುದಾಗಿ ಘೋಷಿಸಿವೆ ಎಂದು ವರದಿಯಾಗಿದೆ.

ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸುವ ಉದ್ದೇಶದಿಂದ ಅಕ್ಟೋಬರ್‌ನಲ್ಲಿ ಅಮೆರಿಕ ಬೆಂಬಲಿತ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ ಇಸ್ರೇಲ್‌ನಿಂದ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ಹಮಾಸ್ ಅಧಿಕಾರಿ ಇವರಾಗಿದ್ದಾರೆ.

ಆದಾಗ್ಯೂ, ಹಮಾಸ್ ಸಂಘಟನೆಯು ಹದ್ದಾದ್ ಅವರ ಸಾವನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ರಕ್ಷಣಾ ಸಚಿವರೊಂದಿಗೆ ಜಂಟಿ ಹೇಳಿಕೆ ನೀಡಿ, ಹದ್ದಾದ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದರಾದರೂ, ಅವರು ಮೃತಪಟ್ಟಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.

2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಮತ್ತು ಪ್ರಸ್ತುತ ಗಾಜಾ ಮೇಲಿನ ಇಸ್ರೇಲ್‌ನ ನಿರಂತರ ದಾಳಿಗೆ ಕಾರಣವಾದ ಆ ಭೀಕರ ದಾಳಿಯ ಪ್ರಮುಖ ಸಂಚುಗಾರರಲ್ಲಿ ಹದ್ದಾದ್ ಕೂಡ ಒಬ್ಬರಾಗಿದ್ದರು ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

2025ರ ಮೇನಲ್ಲಿ ಮೊಹಮ್ಮದ್ ಸಿನ್ವರ್ ಅವರನ್ನು ಇಸ್ರೇಲ್ ಕೊಂದ ನಂತರ ಹದ್ದಾದ್, ಹಮಾಸ್‌ನ ಮಿಲಿಟರಿ ಮುಖ್ಯಸ್ಥರಾಗಿದ್ದರು. ಈತ ಸಾವಿರಾರು ಇಸ್ರೇಲಿ ನಾಗರಿಕರು ಮತ್ತು ಸೈನಿಕರ ಕೊಲೆ, ಅಪಹರಣ ಮತ್ತು ಅವರಿಗೆ ಹಾನಿ ಉಂಟುಮಾಡಲು ಕಾರಣವಾಗಿದ್ದರು ಎಂದು ಕಾಟ್ಜ್ ತಿಳಿಸಿದ್ದಾರೆ.

ಗಾಜಾದಲ್ಲಿ ಶುಕ್ರವಾರ ಅಪಾರ್ಟ್‌ಮೆಂಟ್ ಮತ್ತು ವಾಹನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದು ಮಗು, ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries