HEALTH TIPS

ತೆಲಂಗಾಣದ ಜೂನಿಯರ್ ಕಾಲೇಜುಗಳಲ್ಲೂ ಮಧ್ಯಾಹ್ನದ ಬಿಸಿಯೂಟ: ಸಂಪುಟ ಅನುಮೋದನೆ

 ಹೈದರಾಬಾದ್: ರಾಜ್ಯದ ಎಲ್ಲಾ ಜೂನಿಯರ್ ಕಾಲೇಜುಗಳ (11,12 ನೇ ತರಗತಿ) ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲು ತೆಲಂಗಾಣ ಸಚಿವ ಸಂಪುಟ ಶನಿವಾರ ನಿರ್ಧರಿಸಿದೆ. 


ಜೊತೆಗೆ 'ಇಂದಿರಮ್ಮ' ವಸತಿ ಯೋಜನೆಯ ಎರಡನೇ ಹಂತದ ಅಡಿಯಲ್ಲಿ 2.50 ಲಕ್ಷ ಮನೆಗಳನ್ನು ಮಂಜೂರು ಮಾಡಲೂ ನಿರ್ಧಾರ ತೆಗೆದುಕೊಳ್ಳಲಾಗಿದೆ.

58ನೇ ವಯಸ್ಸಿನಲ್ಲಿ ಎಲ್‌ಎಲ್‌ಎಂ ಪ್ರವೇಶ ಪರೀಕ್ಷೆ ಬರೆದ ತೆಲಂಗಾಣ ಸಚಿವೆ ಸೀತಕ್ಕ

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕಾಂಗ್ರೆಸ್ ಸರ್ಕಾರ ಮೊದಲ ಹಂತದಲ್ಲಿ ಸುಮಾರು ₹ 22,500 ಕೋಟಿ ವೆಚ್ಚದಲ್ಲಿ 4.50 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ.ಈಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2,000 ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗ್ರೇಟರ್ ಹೈದರಾಬಾದ್ ಪ್ರದೇಶದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್‌ಐಜಿಗಾಗಿ (ಕಡಿಮೆ ಆದಾಯದ ಗುಂಪು) ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಸಂಪುಟ ನಿರ್ಧರಿಸಿದೆ.

'ರಾಜ್ಯದ ಎಲ್ಲಾ ಜೂನಿಯರ್ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪರಿಚಯಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ರೆಡ್ಡಿ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries