HEALTH TIPS

OSM ವ್ಯವಸ್ಥೆಯ ಸಮರ್ಥನೆ: ಪ್ರಾಂಶುಪಾಲರ ಒಂದೇ ರೀತಿಯ ವೀಡಿಯೊಗಳು ವೈರಲ್!

ನವದೆಹಲಿ: ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಮೌಲ್ಯಮಾಪನ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಪ್ರಾದೇಶಿಕ ಕಚೇರಿಗಳು ಪ್ರಾಂಶುಪಾಲರಿಗೆ 'ಮಾಹಿತಿ ಸಾಮಗ್ರಿ'ಗಳನ್ನು ವಿತರಿಸಿದ ನಂತರ, ಶುಕ್ರವಾರ ವಿವಿಧ ಶಾಲೆಗಳ ಪ್ರಾಂಶುಪಾಲರ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

OSM ಮೂಲಕ ಮಾಡಲಾಗಿರುವ ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಭಾರೀ ತಪ್ಪುಗಳು ಸಂಭವಿಸಿದ ಬಳಿಕ, ಈ ವ್ಯವಸ್ಥೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ವಿವಿಧ ಶಾಲೆಗಳ ಪ್ರಾಂಶುಪಾಲರು ತಮ್ಮ ವೀಡಿಯೊ ಸಂದೇಶಗಳಲ್ಲಿ ಬಹುತೇಕ ಒಂದೇ ರೀತಿಯ ಭಾಷೆ ಮತ್ತು ಪದಗಳನ್ನು ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದಿದೆ.

CBSEಯ ಪ್ರಾದೇಶಿಕ ಕಚೇರಿಗಳು ಪ್ರಾಂಶುಪಾಲರಿಗಾಗಿ ಹೊರಡಿಸಿರುವ 'ಮಾಹಿತಿ ಸಾಮಗ್ರಿ', ನೂತನ ಮೌಲ್ಯಮಾಪನ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ ಎನ್ನುವುದನ್ನು ಕೆಲವು ಪತ್ರಿಕೆಗಳು ಈಗಾಗಲೇ ವರದಿ ಮಾಡಿದ್ದವು. ವೀಡಿಯೊದಲ್ಲಿ ಏನನ್ನು ಓದಬೇಕು ಎಂಬ ಬಗ್ಗೆ ಬರಹಗಳನ್ನೂ ಒದಗಿಸಲಾಗಿತ್ತು.

ಹಲವಾರು ಪ್ರಾಂಶುಪಾಲರು ಬಹುತೇಕ ಒಂದೇ ರೀತಿಯ ಭಾಷೆಯನ್ನು ಬಳಸಿದ್ದಾರೆ ಹಾಗೂ OSM ಮೌಲ್ಯಮಾಪನ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಈ ವ್ಯವಸ್ಥೆಯು 'ಪಾರದರ್ಶಕವಾಗಿದೆ, ನಿಖರವಾಗಿದೆ, ವೇಗ ಹೊಂದಿದೆ ಮತ್ತು ತಂತ್ರಜ್ಞಾನ ಆಧಾರಿತವಾಗಿದೆ' ಎಂದು ಅವರು ಬಣ್ಣಿಸಿದ್ದಾರೆ.

ಈ ಮಾಹಿತಿ ಸಾಮಗ್ರಿಯನ್ನು ಸರ್ಕಾರಿ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ್ ನವೋದಯ ವಿದ್ಯಾಲಯಗಳು ಸೇರಿದಂತೆ ನೂರಾರು ಶಾಲೆಗಳಿಗೆ ವಿತರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ವೀಡಿಯೊಗಳಲ್ಲಿ ಏನನ್ನು ಓದಬೇಕು ಮತ್ತು OSM ಮಾರ್ಕಿಂಗ್ ವ್ಯವಸ್ಥೆಯನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂದು ಅದರಲ್ಲಿ ನಿರ್ದೇಶಿಸಲಾಗಿತ್ತು.

ತಮ್ಮ ಅಂಕಗಳಲ್ಲಿ ವ್ಯತ್ಯಾಸಗಳು ಸಂಭವಿಸಿವೆ ಎಂಬುದಾಗಿ ಹಲವಾರು 12ನೇ ತರಗತಿ ವಿದ್ಯಾರ್ಥಿಗಳು ಹೇಳಿದ ಬಳಿಕ ಒಎಸ್‌ಎಮ್ ಮಾರ್ಕಿಂಗ್ ವ್ಯವಸ್ಥೆ ವಿವಾದಕ್ಕೀಡಾಗಿದೆ.

*OSMನ್ನು ಹೊಗಳುವಂತೆ ಹೇಳಿದ್ದಾರೆ ಎಂದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ವೀಡಿಯೊಗಳು ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಕ್ರಮವನ್ನು ಸಮರ್ಥಿಸಿಕೊಳ್ಳುವಂತೆ ಶಿಕ್ಷಕರು ತಮಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಒಎಸ್‌ಎಮ್ ಮಾರ್ಕಿಂಗ್ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವಂತೆ ತನ್ನ ಶಾಲೆಯ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.

'ನನ್ನ ಶಾಲೆಯ ಶಿಕ್ಷಕರು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗವಾಗಿ ಪೋಸ್ಟ್ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಅದರಲ್ಲಿ "ನನ್ನ ಹೆಸರು, ನಾನು CBSE ಬೋರ್ಡ್‌ನಲ್ಲಿ ಇಂಥ ವಿಷಯದಲ್ಲಿ ಇಷ್ಟು ಶೇಕಡಾವಾರು ಅಂಕಗಳನ್ನು ಹೊಂದಿದ್ದೇನೆ ಮತ್ತು ನನಗೆ ಒಎಸ್‌ಎಮ್ ಮೌಲ್ಯಮಾಪನ ವ್ಯವಸ್ಥೆಯಿಂದ ಯಾವುದೇ ತೊಂದರೆಯಿಲ್ಲ" ಎಂಬುದಾಗಿ ಬರೆಯಲು ಹೇಳುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries