ಜಾಗತಿಕವಾಗಿ ದಿಲ್ಲಿ ಐಐಟಿ 118ನೇ ರ‍್ಯಾಂಕಿಂಗ್ ಪಡೆದಿದ್ದು, ಭಾರತೀಯ ಸಂಸ್ಥೆಯೊಂದಕ್ಕೆ ಇದು ಗರಿಷ್ಠ ರ‍್ಯಾಂಕಿಂಗ್ ಆಗಿದೆ.
ಜಾಗತಿಕ ವಿವಿಗಳ ರ‍್ಯಾಂಕಿಂಗ್ ನಲ್ಲಿ 52 ಭಾರತೀಯ ವಿವಿಗಳು ಸ್ಥಾನ ಪಡೆದಿವೆ. ಆ ಪೈಕಿ 26 ವಿವಿಗಳು ತಮ್ಮ ರ‍್ಯಾಂಕಿಂಗ್ ಗಳನ್ನು ಸುಧಾರಣೆಗೊಳಿಸಿದ್ದು, 9 ವಿವಿಗಳು ಹಿಂದಿನ ರ‍್ಯಾಂಕಿಂಗ್ ಅನ್ನೇ ಉಳಿಸಿಕೊಂಡಿವೆ. ಇತರ 15 ವಿವಿಗಳ ರ‍್ಯಾಂಕಿಂಗ್ ಕುಸಿತವನ್ನು ಕಂಡಿದ್ದರೆ, ಎರಡು ವಿವಿಗಳು ಮೊದಲ ಬಾರಿಗೆ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಸಂಶೋಧನೆ ಉದ್ಯೋಗವಕಾಶ ಮಾನದಂಡದಲ್ಲಿ ಬೆಂಗಳೂರಿನ ಐಐಎಸ್‌ಸಿಗೆ ಜಾಗತಿಕ 21ನೇ ರ‍್ಯಾಂಕ್ ಪಡೆದಿದೆ.
ಸಂಶೋಧನೆ ಹಾಗೂ ಉದ್ಯೋಗಾವಕಾಶದ ಮಾನದಂಡಗಳಲ್ಲಿಯೂ ಭಾರತವು ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಸಂಶೋಧನಾ ಪರಿಣಾಮ ವಿಭಾಗದಲ್ಲಿ ಭಾರತದ ಹನ್ನೊಂದು ವಿವಿಗಳು ವಿಶ್ವದ ಪ್ರಮುಖ 100 ವಿವಿಗಳಲ್ಲಿ ಸ್ಥಾನ ಪಡೆದಿವೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಾಗತಿಕವಾಗಿ ಈ ವಿಭಾಗದಲ್ಲಿ 21ನೇ ಸ್ಥಾನದಲ್ಲಿದೆ. ಉದ್ಯೋಗಾವಕಾಶಗಳ ಮಾನದಂಡದಲ್ಲಿ ಭಾರತದ 6 ವಿವಿಗಳು ಟಾಪ್ 100 ರ‍್ಯಾಂಕಿಂಗ್ ನಲ್ಲಿ ಸ್ಥಾನ ಪಡೆದಿವೆ.
ಉದ್ಯೋಗದಾತರ ಪ್ರತಿಷ್ಠೆ ವಿಭಾಗದಲ್ಲಿ ಬಾಂಬೆ ಐಐಟಿಯು ಜಾಗತಿಕವಾಗಿ 32ನೇ ರ‍್ಯಾಂಕ್ ಪಡೆದಿದೆ. ಕ್ಯೂಎಸ್ ಸಮೀಕ್ಷೆಯಲ್ಲಿ ಲಭ್ಯವಾದ ದತ್ತಾಂಶಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಜಾಗತಿಕವಾಗಿ 69,400 ಮಂದಿ ಉದ್ಯೋಗದಾತರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಅವರು ಉದ್ಯೋಗ ನೇಮಕಾತಿಗೆ ಯಾವ ವಿವಿಗಳ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು.
ಉದ್ಯೋಗದಾತರ ವರ್ಚಸ್ಸಿನಲ್ಲಿ ದಿಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ 39ನೇ ರ‍್ಯಾಂಕ್ ಪಡೆದಿದೆ.

