ಚೆನ್ನೈ : 'ತಿರುವಳ್ಳೂರ್ ಜಿಲ್ಲೆಯ 'ಸೇಂಟ್ ಪೀಟರ್ಸ್ ಪೌಲ್ ಸೀಫುಡ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಂ ಅನಿಲ ಸೋರಿಕೆಯಿಂದಾದ ಅವಗಢದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ' ಎಂದು ಕಾರ್ಮಿಕ ಅಭಿವೃದ್ಧಿ ಸಚಿವ ಜೆ. ಮೊಹಮ್ಮದ್ ಫರ್ವಾಸ್ ಅವರು ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಿದರು.
'ಅನಿರೀಕ್ಷಿತವಾಗಿ ಪೈಪ್‌ಲೈನ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದ 74 ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಈ ಪೈಕಿ 70 ಮಂದಿ ಮಹಿಳೆಯರಿದ್ದರು' ಎಂದರು.
'ಈ ಐವರು ಮಹಿಳೆಯರು ಒಡಿಶಾದವರು. ಮೃತದೇಹಗಳನ್ನು ವಾಪಸು ತರಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ' ಎಂದು ಒಡಿಶಾದ ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಹಖುಟಿಯಾ ಸೋಮವಾರ ಹೇಳಿದ್ದಾರೆ.

