HEALTH TIPS

ನ್ಯೂಯಾರ್ಕ್ ಜಾತಿ ಸಮಾನತೆ ಮಸೂದೆ ಮಂಡನೆ ವಿಫಲ

 ನ್ಯೂಯಾರ್ಕ್ : ನ್ಯೂಯಾರ್ಕ್‍ನ ತಾರತಮ್ಯ ವಿರೋಧಿ ಕಾನೂನುಗಳ ಅಡಿಯಲ್ಲಿ ಜಾತಿಯನ್ನು ಸುರಕ್ಷಿತ ವರ್ಗವಾಗಿ ಸೇರಿಸಲು ಪ್ರಯತ್ನಿಸಿದ ಎರಡು ಮಸೂದೆಗಳು ಈ ಶಾಸಕಾಂಗ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ವಿಫಲವಾಗಿವೆ. 


ನ್ಯೂಯಾರ್ಕ್ ಸೆನೆಟ್ ಬಿಲ್ ಎಸ್.6531 ಮತ್ತು ಅಸೆಂಬ್ಲಿ ಬಿಲ್ ಎ.6920 ಅನ್ನು ಮೊದಲು 2025ರಲ್ಲಿ ಪರಿಚಯಿಸಲಾಗಿದ್ದು ಇದು ನ್ಯೂಯಾರ್ಕ್ ರಾಜ್ಯದಲ್ಲಿ ವಾಸಿಸುವ ಹಿಂದೂಗಳು, ಭಾರತೀಯರು ಅಥವಾ ದಕ್ಷಿಣ ಏಷ್ಯಾ ಮೂಲದ ಜನರನ್ನು ಹೇಗೆ ಪ್ರತ್ಯೇಕಿಸುತ್ತದೆ ಎಂಬುದರ ಕುರಿತು ಪ್ರಮುಖ ಚರ್ಚೆಯನ್ನು ಪ್ರಚೋದಿಸಿತು.

ಉತ್ತರ ಅಮೆರಿಕದ ಹಿಂದುಗಳ ಒಕ್ಕೂಟ(ಸಿಒಎಚ್‍ಎನ್‍ಎ) ಮಸೂದೆಗಳ ಅಂಗೀಕಾರದ ವಿರುದ್ಧ ಪ್ರಚಾರ ಮಾಡಿತು ಮತ್ತು ಈ ಮಸೂದೆಗಳ ವಿರುದ್ಧ ಮತ ಚಲಾಯಿಸಲು ಅಸೆಂಬ್ಲಿ ಸದಸ್ಯರು ಮತ್ತು ಸೆನೆಟರ್‌ಗಳಿಗೆ ಮನವಿ ಮಾಡಿತು. ಜಾತಿಯು ತಟಸ್ಥ ಪದವಲ್ಲ ಮತ್ತು ಜಾತಿಯನ್ನು ಸಂರಕ್ಷಿತ ವರ್ಗವನ್ನಾಗಿ ಮಾಡುವುದರಿಂದ ಪಕ್ಷಪಾತವನ್ನು ಸಾಂಸ್ಥಿಕಗೊಳಿಸಿದಂತಾಗುತ್ತದೆ ಎಂದು ಸಿಒಎಚ್‍ಎನ್‍ಎ ಹೇಳಿದೆ.

ಮಸೂದೆ ಅನುಮೋದನೆ ಪಡೆಯಲು ವಿಫಲಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಒಕ್ಕೂಟದ ನಿರ್ದೇಶಕಿ ಸುಧಾ ಜಗನ್ನಾಥನ್ `ನನಗೆ ಸಾಂತ್ವನ ಮತ್ತು ಶಕ್ತಿಯನ್ನು ಒದಗಿಸುವ ನನ್ನ ಸ್ವಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿರುದ್ಧ ನನ್ನ ಗುರುತನ್ನು ಆಯುಧವಾಗಿ ಬಳಸುವ ಪ್ರಯತ್ನ ಆಕ್ರಮಣಕಾರಿಯಾಗಿದೆ' ಎಂದು ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ಕಾನೂನುಗಳು ಜಾತಿ ರಕ್ಷಣೆಯ ಅಂಶವನ್ನು ಹೊಂದಿಲ್ಲ ಮತ್ತು ರಕ್ಷಣೆಯ ಅನುಪಸ್ಥಿತಿಯಲ್ಲಿ ಬಲಿಪಶುಗಳು ತಾರತಮ್ಯದ ಬಗ್ಗೆ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಆದ್ದರಿಂದ ಈ ಮಸೂದೆ ಅತ್ಯಗತ್ಯವಾಗಿದೆ ಎಂದು ಮಸೂದೆಗಳ ಸಮರ್ಥಕರು ವಾದಿಸುತ್ತಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries