ನವದೆಹಲಿ : 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆ ಮೃತಪಟ್ಟ ಆರು ಯೋಧರ ಹೆಸರನ್ನು ಇದೇ ಮೊದಲ ಬಾರಿ ಬಿಡುಗಡೆ ಮಾಡಲಾಗಿದೆ.
ಈ ಯೋಧರ ಹೆಸರನ್ನು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಕೆತ್ತನೆ ಮಾಡಲಾಗಿದೆ. ಇದರಲ್ಲಿ ಭೂಸೇನೆಯ ಐವರು ಮತ್ತು ವಾಯುಪಡೆಯ ಒಬ್ಬ ಯೋಧ ಇದ್ದಾರೆ.
2025ರ ಮೇನಲ್ಲಿ ಕಾರ್ಯಾಚರಣೆ ನಡೆದಿತ್ತು. ಆನಂತರ ಇದೇ ಮೊದಲ ಬಾರಿಗೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಆರು ಯೋಧರ ಹೆಸರನ್ನು ಭಾರತ ಸರ್ಕಾರ ಬಹಿರಂಗಪಡಿಸಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕದ 'ತ್ಯಾಗಚಕ್ರ' ಗೋಡೆಯ '3-ಡಿ' ಭಾಗದಲ್ಲಿ ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್‌ಮನ್ ಸುನಿಲ್‌ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ಅಗ್ನಿವೀರ್ ಮೂದ್ ಮುರಳಿನಾಯಕ್, ಹವಾಲ್ದಾರ್ ಸುನಿಲ್ ಕುಮಾರ್ ಸಿಂಗ್, ಐಎಎಫ್‌ನ ಸಾರ್ಜೆಂಟ್ ಸುರೇಂದ್ರ ಕುಮಾರ್ ಹೆಸರು ಕೆತ್ತನೆ ಮಾಡಲಾಗಿದೆ.

