HEALTH TIPS

ಸಂಚರಿಸುತ್ತಿದ್ದ ಬಸ್ಸಿನಲ್ಲಿ ಯುವತಿ ದೇಹಸ್ಪರ್ಶಿಸಿ ಕಿರುಕುಳ-ಆರೋಪಿ ಬಂಧನ

ಉಪ್ಪಳ: ಉಪ್ಪಳದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಯುವಕನನ್ನು ಮಂಜೇಶ್ವರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಣ್ಣೂರು ಅಂಜರಕಂಡಿ ವೆಸ್ಟ್ ಮಣಲ್ ನಿವಾಸಿ ಇಬ್ರಾಹಿಂ ಕಂಡೋತ್ (43)ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ.   ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಬಸ್‍ನಲ್ಲಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಇಬ್ರಾಹಿಂನನ್ನು ಬಂಧಿಸಲಾಘಿದೆ.  ಬಸ್ ಕಾಸರಗೋಡಿನಿಂದ ಪ್ರಯಾಣ ಆರಂಭಿಸಿದ ಕ್ಷಣದಿಂದ ಯುವತಿಯ ಸಮೀಪ ನಿಂತಿದ್ದ ಇಬ್ರಾಹಿಂ ಆಕೆಯ ದೇಹ ಸ್ಪರ್ಶಿಸಿ ಕಿರುಕುಳ ನೀಡಲಾರಂಭಿಸಿದ್ದನು.  ಈತನ ವರ್ತನೆ ಬಗ್ಗೆ ಯುವತಿ ವಿರೋಧ ವ್ಯಕ್ತಪಡಿಸಿದರೂ, ಇದನ್ನು ಲೆಕ್ಕಿಸದೆ ದೇಹ ಸ್ಪರ್ಶ ಸೇರಿದಂತೆ ಅಸಭ್ಯವಾಗಿ ವರ್ತಿಸುವ ಮೂಲಕ ಈತ ಕಿರುಕುಳ ಮುಂದುವರಿಸಿದ್ದನು.   ಈತನ ಕಿರುಕುಳ ಸಹಿಸಲಾಗದೆ  ಯುವತಿ  ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಬಸ್ ಉಪ್ಪಳ ಬಸ್ ನಿಲ್ದಾಣಕ್ಕೆ ತಲುಪಿದಾಗ ನಾಗರಿಕರು ಯುವಕನನ್ನು ಸೆರೆಹಿಡಿದು ಉಪ್ಪಳ ಪೆÇಲೀಸ್ ಕಂಟ್ರೋಲ್ ರೂಂಗೆ ಒಪ್ಪಿಸಿದ್ದಾರೆ.  ಕೂಡಲೇ ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ,  ಇಬ್ರಾಹಿಂನನ್ನು ವಶಕ್ಕೆ ತೆಗೆದುಕೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries