ಕಾಸರಗೋಡು: ಮಂಜೇಶ್ವರ ತಾಲೂಕು ಕಚೇರಿಗಾಗಿ ನೂತನ ಮಿನಿ ಸಿವಿಲ್ ಸ್ಟೇಷನ್ ಸಾಕಾರಗೊಳಿಸಲು ಕೇರಳ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸಿದ ಐಕ್ಯರಂಗ ಸರ್ಕಾರಕ್ಕೆ ಕೇರಳ ಎನ್‍ಜಿಒ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿ ಅಭಿನಂದನೆ ಸಲ್ಲಿಸಿದೆ. ಸಂಘಟನೆ ವತಿಯಿಂದ ಮಂಜೇಶ್ವರ ತಾಲೂಕು ಕಚೇರಿ ವಠಾರದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಅಧ್ಯಕ್ಷ ಎ.ಟಿ. ಶಶಿ, ರಾಜ್ಯ ಸಮಿತಿ ಸದಸ್ಯರಾದ ಲೋಕೇಶ್ ಎಂ.ಬಿ. ಆಚಾರ್, ಜಯಪ್ರಕಾಶ್ ಆಚಾರ್ಯ, ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಟಿ.ಪಿ. ರಾಜೇಶ್, ಶಾಖಾ ಕಾರ್ಯದರ್ಶಿ ನಿಖಿಲ್, ಇಬ್ರಾಹಿಂ, ಗುರುರಾಜ್ ಪಿ.ವೈ., ಮೊಹಮ್ಮದ್ ಹಾರಿಸ್, ಸುರೇಶ್ ಕೆ., ಮೊಹಮ್ಮದ್ ಜಾಫರ್ ಕೆ.ಎಸ್. ಮೊದಲಾದವರು ಭಾಗವಹಿಸಿದ್ದರು. ನೂತನ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ, ತಾಲೂಕು ಕಚೇರಿಗೆ ಸ್ವಂತ ಕಟ್ಟಡದ ಕನಸು ನನಸಾಗಿಸುವಂತೆ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದೆ.


