ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಾಚನ ಮಾಸಾಚರಣೆ ಹಾಗೂ ವಿವಿಧ ಕ್ಲಬ್‍ಗಳ ಉದ್ಘಾಟನೆ ನಡೆಯಿತು. ಮೀಯಪದವು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸುನೀತ ಎ ಅಧ್ಯಕ್ಷತೆ ವಹಿಸಿದ್ದರು.
ಲೇಖಕಿ ದೀಪ ಪಿ.ಎಂ. ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ದರ್ಶಿನ್ ಚಿರಾಲ್ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದನು. ನೌಕರ ಸಂಘದ ಕಾರ್ಯದರ್ಶಿ ಶರತ್ ಕುಮಾರ್ ಬೇಳ ಸ್ವಾಗತಿಸಿ ಸೂರಜ್ ವಂದಿಸಿದರು. ವಿದ್ಯಾರ್ಥಿಗಳಿಂದ ಕವಿತಾಲಾಪನೆ, ಪುಸ್ತಕ ಪರಿಚಯ, ಆಸ್ವಾದನಾ ಟಿಪ್ಪಣಿ, ನೃತ್ಯ ರೂಪಕ, ನಾಟಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು. ಶುಭ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಹೇಮಲತ ಎನ್, ಗೀತ ನೇತೃತ್ವ ನೀಡಿದರು.

.jpeg)
.jpeg)
