HEALTH TIPS

ಭಾರತ ಸ್ಕೌಟ್ಸ್& ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಜೂನ್ 25 ರಂದು ಬನವಾಸಿಗೆ

ಬದಿಯಡ್ಕ: ಕರ್ನಾಟಕ ರಾಜ್ಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ, ಸಮಾಜ ಸುಧಾರಕ ಪಿ.ಜಿ.ಆರ್. ಸಿಂಧ್ಯಾ ಅವರು ಜೂ. 25 ರಂದು ನೀರ್ಚಾಲು ಸಮೀಪದ ಬನವಾಸಿ ಪ್ರಕೃತಿ ಧಾಮಕ್ಕೆ ಭೇಟಿ ನೀಡಲಿದ್ದಾರೆ. ಅಪರಾಹ್ನ 2 ರಿಂದ ಸಿಂಧ್ಯಾಸಂಧ್ಯೆ ಎಂಬವಿಶೇಷ ಸಂವಾದ ಕಾರ್ಯಕ್ರಮವನ್ನು ಬನವಾಸಿಯಲ್ಲಿ ಏರ್ಪಡಿಸಲಾಗಿದೆ. 


ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ಸಿಂಧ್ಯಾ ಅವರು ರಾಜ್ಯದ ಗೃಹ, ಸಾರಿಗೆ ಹಾಗೂ ಬೃಹತ್ ಕೈಗಾರಿಕಾ ಸಚಿವರಾಗಿ ದಕ್ಷ ಆಡಳಿತ ನೀಡಿದ ಅನುಭವ ಹೊಂದಿರುವವರು. ಪರಿಸರ ಪ್ರೇಮಿಯಾಗಿರುವ ಇವರು ಸಮಾಜ ಸುಧಾರಣಾ ಕಾರ್ಯಗಳಲ್ಲೂ ಸದಾ ಮುಂಚೂಣಿಯಲ್ಲಿರುವವರಾಗಿದ್ದಾರೆ. ಬನವಾಸಿ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಕಾಸರಗೋಡಿನ ಕನ್ನಡಿಗರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಬನವಾಸಿಯ ಡಾ.ರತ್ನಾಕರ ಮಲ್ಲಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries