ಚಂಡಿಗಢ: ಪಂಚಕುಲ ಮಹಾನಗರ ಪಾಲಿಕೆಗೆ ಸಂಬಂಧಿಸಿದ 76.46 ಕೋಟಿ ರೂ.ಗಳ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣ ಕೇಡರ್ ನ ಅಮಾನತುಗೊಂಡ IAS ಅಧಿಕಾರಿ ರಾಮ್ ಕುಮಾರ್ ಸಿಂಗ್ ಅವರನ್ನು CBI ಬಂಧಿಸಿದೆ.
ಈ ಮಹಾನಗರ ಪಾಲಿಕೆಯ ಖಾತೆಗಳನ್ನು ಚಂಡಿಗಢದ ಸೆಕ್ಟರ್ 32ರಲ್ಲಿರುವ IDFC FIRST Bank ಶಾಖೆಯಲ್ಲಿ ನಿರ್ವಹಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣ ನಾಗರಿಕ ಸೇವೆಯಿಂದ ಬಡ್ತಿ ಪಡೆದ 2012ನೇ ಬ್ಯಾಚ್ ನ IAS ಅಧಿಕಾರಿಯಾದ ಸಿಂಗ್, ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹರಿಯಾಣ ಕೇಡರ್‌ನ ಮೊದಲ IAS ಅಧಿಕಾರಿಯಾಗಿದ್ದಾರೆ. ಅವರನ್ನು ಎಪ್ರಿಲ್ 9ರಂದು ಅಮಾನತುಗೊಳಿಸಲಾಗಿತ್ತು.
CBI, ಚಂಡಿಗಢ ಮತ್ತು ಕರ್ನಾಲ್‌ನಲ್ಲಿರುವ ಅವರ ನಿವಾಸಗಳ ಮೇಲೂ ದಾಳಿ ನಡೆಸಿದ್ದು, ದೋಷಾರೋಪಣೆಗೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

