ಕಾಸರಗೋಡು: ನಗರದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ರ್ಯಾಗಿಂಗ್ ನಡೆಸಿದ ಆರೋಪದನ್ವಯ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಾದ 13 ಮಂದಿಯನ್ನು ತನಿಖಾ ವಿಧೇಯಗೊಳಿಸಿ ಪ್ರಾಂಶುಪಾಲ ವಿ.ಎಸ್. ಅನಿಲ್ ಕುಮಾರ್ ಕಾಲೇಜಿನಿಂದ ಅಮಾನತುಗೊಳಿಸಿದ್ದಾರೆ.
ಜುಲೈ 13ರಂದು ಕಾಲೇಜು ಕ್ಯಾಂಪಸ್‍ನಲ್ಲಿ ತಂಡವೊಂದು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿ ಬೆದರಿಸಿದ್ದು ಹಲ್ಲೆ ನಡೆಸಿದುದಾಗಿ ಆರೋಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿ ರಕ್ಷಕರಲ್ಲಿ ತಿಳಿಸಿದ್ದು, ಅನಂತರ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಲಾಗಿತ್ತು. ಕಾಲೇಜು ಅಧಿಕಾರಿಗಳು ಪ್ರಾಥಮಿಕ ತನಿಖೆಯ ಆಧಾರದಲ್ಲಿ ಆರೋಪಕ್ಕೊಳಗಾದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರ್ಯಾಗಿಂಗ್‍ಗೊಳಗಾದ ವಿದ್ಯಾರ್ಥಿ ಪ್ರಾಂಶುಪಾಲರಿಗೆ ನೀಡಿದ ದೂರಿನನ್ವಯ ಕಾಲೇಜಿನಲ್ಲಿ ನಡೆದ ಆ್ಯಂಟಿ ರ್ಯಾಗಿಂಗ್ ಸೆಲ್‍ನಲ್ಲಿ ದೂರನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿತ್ತು. ರ್ಯಾಗಿಂಗ್‍ಗೆ ಒಳಗಾದ ವಿದ್ಯಾರ್ಥಿ ಪೆÇಲೀಸರಿಗೂ ದೂರು ನೀಡಿದ್ದಾನೆ. ಕಳೆದ ವರ್ಷ ಕಾಲೇಜಿನಲ್ಲಿ ಶಿಸ್ತುಕ್ರಮಕ್ಕೊಳಗಾಗಿದ್ದ ವಿದ್ಯಾರ್ಥಿ ಸೇರಿದಂತೆ ನಾಲ್ಕು ಮಂದಿ ರ್ಯಾಗಿಂಗ್ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

