ಮಧೂರು: ಸಾಮೂಹಿಕ ಧನ್ವಂತರಿ ಹೋಮ ಜುಲೈ 20ರಂದು ಸಂಜೆ 5.30ಕ್ಕೆ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ. ಆರ್ಟ್ ಆಫ್ ಲಿವಿಂಗ್ ನ ಆಚಾರ್ಯ ಗುರುದೇವ್ ಶ್ರೀ ರವಿಶಂಕರ ಗುರೂಜಿ ಅವರ ಕೃಪಾಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿದೆ. ಬೆಂಗಳೂರಿನ ಬ್ರಹ್ಮಚಾರಿ ತೇಜೋಮಯ ಮತ್ತು ಆಶ್ರಮ ಪಂಡಿತರ ಮಾರ್ಗದರ್ಶನದಲ್ಲಿ ಧನ್ವಂತರಿ ಹೋಮ ನಡೆಯುವುದು.

