ಬದಿಯಡ್ಕ: ಪೆರಡಾಲ ಪಂಜಿತ್ತಡ್ಕ ದಿ. ಸುಬ್ರಹ್ಮಣ್ಯ ಭಟ್ಟರ ಪತ್ನಿ ಜಯಲಕ್ಷ್ಮೀ ಅಮ್ಮ (78) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಪುತ್ರ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ವಿದೇಶದಲ್ಲಿ ಉದ್ಯೊಗದಲ್ಲಿರುವ ಶಿವಪ್ರಸಾದ, ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲ ಕೃಷ್ಣಮೂರ್ತಿ ಪಿ. ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


